ಕೇರಳದಲ್ಲಿ ಗೋ ಹತ್ಯೆ ನಿಷೇಧ  ಕುರಿತು ವಿಶೇಷ ಅಧಿವೇಶನ !

Kannada News

08-06-2017 396

ತಿರುವನಂತಪುರಂ:-  ಕೇಂದ್ರ ಸರ್ಕಾರದ ಗೋ ಹತ್ಯೆ ನಿಷೇಧ  ಕುರಿತು, ನೂತನ ನೀತಿಯನ್ನು ಮೊದಲಿನಿಂದಲೂ ಕಟುವಾಗಿ ವಿರೋಧಿಸುತ್ತಿರುವ ಕೇರಳ ಸರ್ಕಾರ, ಇಂದು ಕೇರಳದ ವಿಶೇಷ ಅಧಿವೇಶನವನ್ನು ಕರೆದಿದೆ, ಈ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ಗೋ ಹತ್ಯೆ ನಿಷೇಧದ ಕುರಿತು ಸಂಪೂರ್ಣವಾಗಿ ಚರ್ಚಿಸಲಿದೆ ಎಂದು ತಿಳಿದು ಬಂದಿದೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳುವಂತೆ ಕೇಂದ್ರದ ನೂತನ ನೀತಿಯಿಂದ ಕೇರಳದಲ್ಲಿ ಭಾರಿ ವ್ಯತಿರಕ್ತ ಪರಿಣಾಮ ಬೀರಲಿದೆ, ಸುಮಾರು 5 ಲಕ್ಷ ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದರು. ಅಲ್ಲದೆ ಇದಕ್ಕೆ ಹೊಂದಿಕೊಂಡಿರುವ ವ್ಯಾಪಾರಸ್ತರು ಮತ್ತು ಇತರ ಪೂರಕ ವ್ಯಾಪಾರಿಗಳು ಅಪಾರ ನಷ್ಟ ಅನುಭಿವಿಸುತ್ತಾರೆ ಎಂದು ತಿಳಿಸಿದರು.  ಕಳೆದ ಮೇ 29 ರಂದು ಪ್ರಧಾನಿಯವರಿಗೆ ಕೆರಳ ಮುಖ್ಯ ಮಂತ್ರಿ ಪತ್ರವೊಂದನ್ನು ಬರೆದಿದ್ದು, ಪತ್ರದಲ್ಲಿ ಕೆಂದ್ರ ಸರ್ಕಾರದ ಈ ಕಾನೂನು ಪ್ರಜಾಪ್ರಭುತ್ವದ ವಿರೋಧಿಯಾಗಿದೆ ಮತ್ತು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಲಿದೆ, ಇದು ಸಂಪೂರ್ಣ ಜಾತ್ಯಾತೀತ ವಿರೋಧಿ ನಡೆ, ಕೂಡಲೆ ಗೋ ಹತ್ಯೆ ನಿಷೇಧ ಕಾನೂನನ್ನು ಹಿಂಪಡೆಯಬೇಕು ಎಂದು ತಮ್ಮ ಪತ್ರದಲ್ಲಿ ಆಗ್ರಹಿದ್ದಾರೆ ಅಲ್ಲದೇ  ಪತ್ರದಲ್ಲಿ ಕೇಂದ್ರ ಸರ್ಕಾರದ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ.   


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ