‘ನನ್ನ ತಂದೆಯೊಂದಿಗೆ ಕೆಲಸ ಮಾಡೋದು ಸುಲಭವಲ್ಲ’: ಆಲಿಯಾ29-04-2019

ಬಾಲಿವುಡ್ ನಟಿ ಆಲಿಯಾ ಭಟ್ ಇದೇ ಮೊದಲ ಬಾರಿಗೆ ತಂದೆ ಮಹೇಶ್ ಭಟ್ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಡಕ್ 2 ಚಿತ್ರದಲ್ಲಿ ಅಪ್ಪ ಮಗಳು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.

ಇದೇ ಮೊದಲ ಬಾರಿಗೆ ತಂದೆಯೊಂದಿಗೆ ಕೆಲಸ ಮಾಡುತ್ತಿರುವ ಆಲಿಯಾ, ತನ್ನ ತಂದೆಯೊಂದಿಗೆ ಕೆಲಸ ಮಾಡೋದು ಅಷ್ಟು ಸುಲಭವಲ್ಲ. ಉಳಿದೆಲ್ಲ ವಿಷಯಗಳನ್ನು ತನ್ನ ತಂದೆ ತುಂಬಾನೆ ಮೃದು. ಆದರೆ ಸೆಟ್ ನಲ್ಲಿ ಹೇಗಿರುತ್ತಾರೋ ನೋಡಬೇಕಿದೆ ಎಂದಿದ್ದಾರೆ.

ಜನಪ್ರಿಯ ಚಿತ್ರ ಸಡಕ್, 1991 ರಲ್ಲಿ ತೆರೆಕಂಡಿತ್ತು. ಅದರದ್ದೇ ಮುಂದುವರಿದ ಭಾಗವಾಗಿ ಇದೀಗ ಸಡಕ್ 2 ಮೂಡಿಬರಲಿದ್ದು, ಮುಂದಿನ ವರ್ಷ, ಮಾರ್ಚ್ 25 ರಂದು ತೆರೆಕಾಣಲಿದೆ.   


ಸಂಬಂಧಿತ ಟ್ಯಾಗ್ಗಳು

Alia Bhatt Bollywood Mahesh Bhatt Director


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ