ಈ ಬಾರಿ ಡಲ್ ಆಗುತ್ತಾ ಕೋಟ್ಯಧಿಪತಿ ಶೋ..?

Puneeth’s Voice is dull in Kotyadhipathi Promo..!

29-04-2019

ಕನ್ನಡದ ಜನಪ್ರಿಯ ಕಾರ್ಯಕ್ರಮ ಕನ್ನಡದ ಕೋಟ್ಯಧಿಪತಿ ಮತ್ತೆ ಸದ್ದು ಮಾಡತೊಡಗಿದೆ. ಈ ಮೊದಲು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಈ ಶೋ ಈ ಬಾರಿ ಕಲರ್ಸ್ ಕನ್ನಡದಲ್ಲಿ ಆರಂಭವಾಗಲಿದೆ.

ಅಲ್ಲದೇ ಕೋಟ್ಯಧಿಪತಿ ಸೀಸನ್ 4ನ ನಿರೂಪಣೆ ಮತ್ತೆ ಪುನೀತ್ ರಾಜ್ ಕುಮಾರ್ ಪಾಲಾಗಿದೆ. ಆದ್ರೆ ಅದ್ಯಾಕೊ ಈ ಬಾರಿಯ ಕೋಟ್ಯಧಿಪತಿ ಕಾರ್ಯಕ್ರಮ ನೀರಸವಾಗಿ ಆರಂಭವಾಗುತ್ತಾ ಅನ್ನೋ ಪ್ರಶ್ನೆ ವೀಕ್ಷಕರಲ್ಲಿ ಮನೆಮಾಡಿದೆ.

ಅದಕ್ಕೆ ಕಾರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ವೀಕ್ಷಕರಿಗೆ ಕೇಳಲಾಗುವ ಪ್ರಶ್ನೆಗಳಿರುವ ಪ್ರೋಮೊದಲ್ಲಿ ಪುನೀತ್ ಧ್ವನಿ ನಿರಾಸಕ್ತಿಯಿಂದ ಕೂಡಿದೆ. ಅಲ್ಲದೇ ಧ್ವನಿಯಲ್ಲಿ ಉತ್ಸಾಹವೇ ಇಲ್ಲ. ಈಗಲೇ ಹೀಗಾದರೆ ಇನ್ನು ಕಾರ್ಯಕ್ರಮ ಹೇಗೆ ಮೂಡಿ ಬರಬಹುದೇನೋ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Colors Kannada Puneeth Rajkumar Show Promo


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ