ಮೋದಿ ವಿರುದ್ಧ ತೆಲಂಗಾಣ ರೈತರ ಸ್ಪರ್ಧೆ!

Telangana Farmers against Modi

28-04-2019

ಲಖ್ನೋ: ತೆಲಂಗಾಣದ ನಿಜಾಮಾಬಾದ್‍ನ 50 ಅರಿಶಿಣ ಬೆಳೆಗಾರರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾರಾಣಸಿಯಲ್ಲಿ ಸ್ಪರ್ಧಿಸಲು ಆಗಮಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ರೈತರು, ನಾವು ಯಾರನ್ನೂ ವಿರೋಧಿಸುತ್ತಿಲ್ಲ. ನಮ್ಮ ಸಮಸ್ಯೆಗಳನ್ನು ಎತ್ತಿ ತೋರಿಸಲು ಆಗಮಿಸಿದ್ದೇವೆ ಮತ್ತು ಅರಿಶಿಣ ಬೆಳೆ ಮಂಡಳಿ ರಚಿಸಬೇಕು, ಅರಿಶಿಣಕ್ಕೆ ಬೆಂಬಲ ಬೆಲೆ ನೀಡಬೇಕು ಎಂದರು.

ರೈತರ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ರೈತ ನಾಯಕ ಕೆ.ನರಸಿಂಹ ನಾಯ್ಡು, ನಮ್ಮ ಸಮಸ್ಯೆಯನ್ನು ಯುಪಿಎ ಸರ್ಕಾರ ಪರಿಹರಿಸಲಿಲ್ಲ. ಮೋದಿಯವರು ಕೂಡ ಇದನ್ನೇ ಮಾಡಿದ್ದಾರೆ. ನಾವು ಯಾರೊಬ್ಬರ ವಿರುದ್ಧವೂ ಪ್ರಚಾರ ಮಾಡುತ್ತಿಲ್ಲ. ನಾವು ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತೇವೆ. ಅರಿಶಿಣ ಬೆಳೆ ಮಂಡಳಿ ರಚನೆ ಮತ್ತು ಅರಿಶಿಣಕ್ಕೆ ಪ್ರತಿ ಕ್ವಿಂಟಾಲ್‍ಗೆ ಕನಿಷ್ಠ 15,000 ರೂ. ಬೆಂಬಲ ಬೆಲೆ ನೀಡಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದರು.


ಸಂಬಂಧಿತ ಟ್ಯಾಗ್ಗಳು

Varanasi Telangana Modi Loksabha


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ