ಉಗ್ರಗಾಮಿಗೆ ಶಾಪ ಕೊಡಲಿಲ್ಲ ಏಕೆ? - ದಿಗ್ವಿಜಯ್

Why didn

28-04-2019

ಭೋಪಾಲ್: ಸಾಧ್ವಿ ಠಾಕೂರ್ ಅವರು, ದೇಶಕ್ಕಾಗಿ ತ್ಯಾಗ ಮಾಡಿ ಬಲಿದಾನ ಮಾಡಿದ ಹೇಮಂತ್ ಕರ್ಕರೆಯವರಿಗೆ ಶಾಪ ಕೊಟ್ಟಿದ್ದೆ ಎಂದು ಹೇಳುತ್ತಾರೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯ ಜೈಷ್ – ಎ – ಮೊಹಮದ್ ಮುಖ್ಯಸ್ಥ ಮಸೂದ್ ಅಜರ್‍ಗೆ ಶಾಪ ಕೊಟ್ಟಿದ್ದರೆ, ಸರ್ಜಿಕಲ್ ಸ್ಟ್ರೈಕ್ ನಡೆಸುವ ಅಗತ್ಯವೇ ಇರಲಿಲ್ಲ ಎಂದರು.

ಭಯೋತ್ಪಾದಕರು ನರಕದಲ್ಲಿ ಅವಿತಿದ್ದರೂ ಬೇಟೆಯಾಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೇಳುತ್ತಾರೆ. ಆದರೆ, ದೇಶದ ಪುಲ್ವಾಮಾ, ಪಠಾಣ್ ಕೋಟ್ ಮತ್ತು ಉರಿಯಲ್ಲಿ ದಾಳಿಯಾದಾಗ ಮೋದಿಯವರು ಎಲ್ಲಿ ಅವಿತುಕೊಂಡಿದ್ದರು? ಇಂತಹ ದಾಳಿಗಳಿಂದ ತಪ್ಪಿಸಿಕೊಳ್ಳಲು ನಮಗೆ ಏಕೆ ಸಾಧ್ಯವಾಗಲಿಲ್ಲ? ಎಂದು ಭೋಪಾಲ್ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿರುವ ದಿಗ್ವಿಜಯ್ ಸಿಂಗ್ ಅವರು ಪ್ರಶ್ನಿಸಿದರು.

ಹಿಂದುಗಳು, ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು ಸೋದರರು. ಬಿಜೆಪಿಗರು ಹಿಂದುಗಳು ಅಪಾಯದಲ್ಲಿದ್ದಾರೆ. ಅವರು ಒಗ್ಗಟ್ಟಾಗಬೇಕು ಎನ್ನುತ್ತಾರೆ. ಈ ದೇಶವನ್ನು 500 ವರ್ಷಗಳ ಕಾಲ ಮುಸ್ಲಿಮರು ಆಳಿದ್ದಾರೆ. ಯಾವುದೇ ಧರ್ಮಕ್ಕೆ ಯಾವುದೇ ಹಾನಿಯಾಗಿಲ್ಲ. ಧರ್ಮವನ್ನು ಮಾರುವವರಿಂದ ಎಚ್ಚರವಾಗಿರಿ ಎಂದು ಅವರು ಸಲಹೆ ನೀಡಿದರು.

ನಮ್ಮ ಧರ್ಮದಲ್ಲಿ ಹರಹರ ಮಹದೇವ್ ಎನ್ನುತ್ತೇವೆ. ಆದರೆ, ನಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿ, ಬಿಜೆಪಿಗರು ಹರ್ ಹರ್ ಮೋದಿ ಎನ್ನುತ್ತಾರೆ. ಗೂಗಲ್‍ನಲ್ಲಿ ಫೇಕು (ಸುಳ್ಳುಗಾರು) ಎಂದು ಸರ್ಚ್ ಕೊಟ್ಟರೆ ಯಾರ ಫೋಟೋ ಕಾಣಿಸುತ್ತದೆ ಎಂಬುದು ನಮಗೆಲ್ಲ ಗೊತ್ತು ಎಂದು ಸಿಂಗ್ ಹೇಳಿದರು.


ಸಂಬಂಧಿತ ಟ್ಯಾಗ್ಗಳು

Digvijay SIngh Sadhvi Pragya BJP Congress


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ