ಶ್ರೀಲಂಕಾದಲ್ಲಿ ಮಕ್ಕಳು, ಶಂಕಿತ ಉಗ್ರರು ಸೇರಿ 15 ಜನರ ಹತ್ಯೆ

Sri Lanka: 15 people killed in police raid

27-04-2019

ಈಶಾನ್ಯ ಶ್ರೀಲಂಕಾದಲ್ಲಿದ್ದ ಅವಿತಿದ್ದ ಶಂಕಿತ ಇಸ್ಲಾಮಿಕ್ ಸ್ಟೇಟ್ ಉಗ್ರರ ಅಡಗುದಾಣಗಳ ಮೇಲೆ ಸೈನಿಕರು ನಡೆಸಿದ ಗುಂಡಿನ ದಾಳಿ ವೇಳೆ 6 ಮಕ್ಕಳು ಸೇರಿ ಒಟ್ಟು 15 ಜನ ಬಲಿಯಾಗಿದ್ದಾರೆ.

ಈಶಾನ್ಯ ಶ್ರೀಲಂಕಾದ ಕಾಲ್ ಮುನೈ ಪ್ರಾಂತ್ಯದಲ್ಲಿ ಶ್ರೀಲಂಕಾ ಸೇನೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಅಡಗುದಾಣದಲ್ಲಿದ್ದ ಬಾಂಬ್ ಗಳನ್ನು ಉಗ್ರರೇ ಸ್ಫೋಟಿಸಿಕೊಂಡಿದ್ದಾರೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಈ ಕುರಿತು ಹೇಳಿಕೆ ನೀಡಿರುವ ಶ್ರೀಲಂಕಾ ಪೊಲೀಸರು,ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ಉಗ್ರರು ಅಡಗಿರುವ ಖಚಿತ ಮಾಹಿತಿ ಸಿಕ್ಕಿತ್ತು. ಸುದ್ದಿ ತಿಳಿದ ತಕ್ಷಣ ಸೇನಾ ಕಾರ್ಯಾಚರಣೆ ನಡೆಸಲಾಯಿತು. ದಾಳಿ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ 3 ಭಯೋತ್ಪಾದಕರು, ಆರು ಮಕ್ಕಳು ಸೇರಿ ಒಟ್ಟು 15 ಜನ ಮೃತಪಟ್ಟಿದ್ದಾರೆ.  ಉಗ್ರರು ಅವಿತಿದ್ದ ಪ್ರದೇಶವನ್ನು ಸೇನೆ ಸುತ್ತುವರೆದ ಸಮಯದಲ್ಲಿ ಭಯೋತ್ಪಾದಕರು ಬಾಂಬ್ ಸ್ಫೋಟಿಸಿದರು. ಘಟನೆಯಲ್ಲಿ ಆರು ಮಕ್ಕಳು ಸೇರಿದಂತೆ ಹಲವು ನಾಗರಿಕರು ಕೂಡ ಬಲಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Terrorist Police Sri Lanka Bomb


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Drug Alcohol Treatment Drug Rehab Centers Near Me Drug Rehab Near Me Drug Rehab Substance Abuse Dsm 5 http://aaa-rehab.com [url=http://aaa-rehab.com]Alcohol Rehab Centers[/url]
  • JamesBesee
  • Construction, facilities