ದಸರಾ ಆನೆ ಹಠಾತ್ ಸಾವು

Dasara Elephant Drona Dies

27-04-2019

ಕಳೆದೆರಡು ಬಾರಿ ಜಗತ್ಪ್ರಸಿದ್ಧ ಮೈಸೂರು ದಸರಾದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದ ಆನೆ ದ್ರೋಣ ನಿನ್ನೆ  ಹಠಾತ್ ಸಾವನ್ನಪ್ಪಿದೆ.

ನಾಗರಹೊಳೆ ಅಭಯಾಣ್ಯದ ತಿತಿಮತಿ ಆನೆ ಶಿಬಿರದಲ್ಲಿ 37 ವರ್ಷದದ ಗಂಡಾನೆ ದ್ರೊಣ ಸಾವನ್ನಪ್ಪಿದೆ. ಸಮೀಪದಲ್ಲಿದ್ದ ನೀರಿನ ತೊಟ್ಟಿಯಲ್ಲಿ ನೀರು ಕುಡಿದು ಬಂದ ಬಳಿಕ ಹಠಾತ್ ಕುಸಿದ ಆನೆ ಸಾವನ್ನಪ್ಪಿದೆ.

ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ದ್ರೋಣ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎನ್ನಲಾಗಿದ್ದು, ಮರಣೋತ್ತರ ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.


ಸಂಬಂಧಿತ ಟ್ಯಾಗ್ಗಳು

Elephant Mysore Dasara Nagarahole


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ