ತಾಂತ್ರಿಕ ಸಮಸ್ಯೆಯಿಂದಾಗಿ ಏರ್ ಇಂಡಿಯಾ ಪ್ರಯಾಣಿಕರ ಪರದಾಟ

Air India flights hits by check-in software snag across network

27-04-2019

ಏರ್ ಇಂಡಿಯಾದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಸುಮಾರು 6 ಗಂಟೆಗಳ ಕಾಲ ವಿಮಾನಗಳು ಸ್ಥಗಿತಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ. ಬೆಳಗ್ಗೆ 3 ಗಂಟೆಯ ವೇಳೆಗೆ ಉಂಟಾದ ಸರ್ವರ್ ಸಮಸ್ಯೆಯಿಂದಾಗಿ ಜನತ್ತಿನೆಲ್ಲೆಡೆ ಏರ್ ಇಂಡಿಯಾ ಪ್ರಯಾಣಿಕರು ಪರದಾಡುವಂತಾಗಿತ್ತು.

ಏರ್ ಇಂಡಿಯಾದಲ್ಲಿ ಬಳಸಲಾಗುತ್ತಿದ್ದ ಸಿಟಾ ಸರ್ವರ್ ಸಮಸ್ಯೆಯಿಂದಾಗಿ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ಗಳನ್ನು ನೀಡಲಾಗಿರಲಿಲ್ಲ. ಇದರಿಂದಾಗಿ ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಕಾಯುವಂತಾಗಿತ್ತು. ವಿಮಾನಗಳ ಹಾರಾಟದಲ್ಲೂ ವ್ಯತ್ಯಯ ಉಂಟಾಗಿದ್ದರಿಂದ ಇದು ಜಗತ್ತಿನಾದ್ಯಂತ ಪ್ರಯಾಣಿಕರಿಗೆ ಸಮಸ್ಯೆಯುಂಟು ಮಾಡಿತ್ತು. ಈ ಮಧ್ಯೆ ಪ್ರಯಾಣಿಕರಿಗಾದ ತೊಂದರೆಯ ಬಗ್ಗೆ ಏರ್ ಇಂಡಿಯಾ ವಿಷಾದ ವ್ಯಕ್ತಪಡಿಸಿದೆ.


ಸಂಬಂಧಿತ ಟ್ಯಾಗ್ಗಳು

Air India Server Flights Passenger


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ