ಮಕ್ಕಳಿಗೆ ಮೊಬೈಲ್ ನೀಡೋ ಪೋಷಕರೇ ಹುಷಾರ್..!

Don

26-04-2019

ಮಕ್ಕಳನ್ನು ಸಂಭಾಳಿಸೋದಂದ್ರೆ ಸಾಮಾನ್ಯ ಕೆಲಸವಲ್ಲ. ಇಂದಿನ ಬ್ಯುಸಿ ಯುಗದಲ್ಲಿ ಯಾರಿಗೆ ತಾನೆ ಅಷ್ಟು ಸಮಯ, ತಾಳ್ಮೆ ಇದೆ ಹೇಳಿ..?  ಹೇಳಿ ಕೇಳಿ ಇದು ಸ್ಮಾರ್ಟ್ ಯುಗ. ಹಾಗಾಗಿ ಇತ್ತೀಚಿಗೆ ಬಹುತೇಕ ಪೋಷಕರೆಲ್ಲರೂ ಮೊಬೈಲ್, ಲ್ಯಾಪ್ ಟಾಪ್ ಗಳನ್ನು ಕೊಟ್ಟು ಮಕ್ಕಳನ್ನು ಸುಮ್ಮನಿರಿಸೋ ಸುಲಭ ವಿಧಾನ ಕಂಡುಕೊಂಡಿದ್ದಾರೆ. ಆದರೆ, ಪೋಷಕರೇ ಎಚ್ಚರ, ಇದು ನಿಮ್ಮ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಹೌದು, ಇತ್ತೀಚಿಗಷ್ಟೇ ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ನೂತನ ಮಾರ್ಗದರ್ಶಿ ಸೂತ್ರ ಹೊರಡಿಸಿದೆ. ಮಕ್ಕಳಿಗೆ ಮೊಬೈಲ್, ಲ್ಯಾಪ್ ಟಾಪ್ ನೀಡುವುದರಿಂದ ಎಳೆ ಮೆದುಳಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.  ಮೆದುಳಿನ ಬೆಳವಣಿಗೆ ಕುಂಠಿತವಾಗುತ್ತದೆ. ಅಲ್ಲದೇ ಕಣ್ಣಿಗೂ ಹಾನಿಯಾಗುತ್ತದೆ.

ಅದರಲ್ಲೂ ಒಂದು ಒಂದು ವರ್ಷದೊಳಗಿನ ಮಕ್ಕಳಿಗೆ ಸ್ಮಾರ್ಟ್ ಫೋನ್ ತೋರಿಸಲೇಬಾರದು. ಇನ್ನು  2 ರಿಂದ 4 ವರ್ಷದ ಮಕ್ಕಳಿಗೆ ಒಂದು ಗಂಟೆಗಿಂತ ಹೆಚ್ಚು ಮೊಬೈಲ್ ನೀಡಬಾರದೆಂದು ಆರೋಗ್ಯ ಸಂಸ್ಥೆ ಹೇಳಿದೆ.


ಸಂಬಂಧಿತ ಟ್ಯಾಗ್ಗಳು

Smartphone Health Children Brain


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ