ಈ ಜ್ಯೂಸ್ ಕುಡಿದರೆ ಹೊಳಪಿನ ತ್ವಚೆ ಗ್ಯಾರಂಟಿ

Juice Daily For Flawless Skin

26-04-2019

ಹೊರಗೆ ಕಾಲಿಟ್ಟರೆ ಸಾಕು ಬಿರುಬಿಸಿಲು. ಸುಡುಬಿಸಿಲಿನಲ್ಲಿ ಎಷ್ಟೇ ಮುಂಜಾಗ್ರತೆ ವಹಿಸಿದರೂ ಚರ್ಮಕ್ಕೆ ಹಾನಿಯಾಗದೇ ಇರದು. ಇನ್ನು ಕೆಲವರು ತಂಪಿನಲ್ಲೇ ಇದ್ದರೂ ಮುಖ ಸುಕ್ಕಾಗುವುದು, ಒಣಗುವುದು, ನೆರಿಗೆ ಮೂಡುವುದು ಸೆಖೆಗಾಲದಲ್ಲಿ ಕಾಮನ್. ಆದ್ರೆ ಈ ಜ್ಯೂಸ್ ಕುಡಿದರೆ ಚರ್ಮಕ್ಕೆ ಕಾಂತಿ ಬರೋದು ಸುಳ್ಳಲ್ಲ.

ನೆಲ್ಲಿಕಾಯಿಗೆ ಆಯುರ್ವೇದಲ್ಲಿ ವಿಶೇಷ ಪ್ರಾಶಸ್ತ್ಯವಿದೆ. ಸಿ ವಿಟಾಮಿನ್ ಹೊಂದಿರುವ ನೆಲ್ಲಿಕಾಯಿಯಲ್ಲಿ ವಿಶೇಷ ಆರೋಗ್ಯ ಗುಣವಿದೆ. ಇದರ ಜೊತೆಗೆ ಶುದ್ಧ ಜೇನುತುಪ್ಪ ಸೇರಿಸಿ ಜ್ಯೂಸ್ ತಯಾರಿಸಿ ಕುಡಿದರೆ ನಿಮ್ಮ ತ್ವಚೆ ಕಾಂತಿಯುಕ್ತವಾಗುತ್ತೆ. 5-6 ನೆಲ್ಲಿಕಾಯಿಯನ್ನು ಗ್ರೈಂಡ್ ಮಾಡಿ, ನಿಮಗೆಷ್ಟು ಬೇಕೋ ಅಷ್ಟು ನೀರು ಸೇರಿಸಿ, ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯಬೇಕು. ಇದರಿಂದ ತ್ವಚೆ ಆರೋಗ್ಯಯುತವಾಗುತ್ತದೆ ಅಲ್ಲದೇ, ಇದು ತೂಕ ಇಳಿಕೆಗೂ ಸಹಕಾರಿ.


ಸಂಬಂಧಿತ ಟ್ಯಾಗ್ಗಳು

Alma Skin Honey Beauty


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ