ಮದುವೆ ಬಗ್ಗೆ ಮೌನ ಮುರಿದ ಅರ್ಜುನ್ ಕಪೂರ್

Arjun Kapoor opens up on relationship with Malaika

26-04-2019

ಬಾಲಿವುಡ್ ನಟ ಅರ್ಜುನ್ ಕಪೂರ್ ಹಾಗೂ ನಟಿ ಮಲೈಕಾ ಅರೋರಾ ನಡುವೆ ಅಫೇರ್ ನಡೀತಾ ಇರೋದು ಎಲ್ಲರಿಗೂ ಗೊತ್ತಿರೋ ವಿಷಯ. ಸದ್ಯದಲ್ಲೇ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಬಗ್ಗೆ ಸ್ವತಃ ಅರ್ಜುನ್ ಹೇಳಿಕೆ ನೀಡಿದ್ದು ತಮ್ಮ ಮನಸ್ಸಲ್ಲೇನಿದೆ ಅನ್ನೋದನ್ನು ಬಹಿರಂಗಪಡಿಸಿದ್ದಾರೆ.

ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಮಲೈಕಾ ಹಾಗೂ ತಮ್ಮ ಮದುವೆಯ ಬಗೆಗಿನ ವದಂತಿಗಳ ಬಗ್ಗೆ ಮಾತನಾಡಿರುವ ಅರ್ಜುನ್, ತಮಗಿನ್ನೂ 33 ವರ್ಷ ವಯಸ್ಸು. ಇಷ್ಟು ಬೇಗ ಸಂಸಾರ ಬಂಧನದಲ್ಲಿ ಸಿಲುಕಿಕೊಳ್ಳೋಕೆ ಇಷ್ಟವಿಲ್ಲ. ಹಾಗೇನಾದರೂ ಮಲೈಕಾ ಜೊತೆ ಮದುವೆಯಾದರೆ ವಿಷಯ ಎಲ್ಲರಿಗೂ ತಿಳಿದೇ ತಿಳಿಯುತ್ತದೆ. ಅದನ್ನು ಮುಚ್ಚಿಡೋಕೆ ಸಾಧ್ಯವಿಲ್ಲ ಎಂದಿದ್ದಾರೆ.

ಅರ್ಜುನ್ ಕಪೂರ್ ರಾಜ್ ಕುಮಾರ್ ಗುಪ್ತಾ ನಿರ್ದೇಶನದ ಇಂಡಿಯಾಸ್ ಮೋಸ್ಟ್ ವಾಂಟೆಡ್ ಚಿತ್ರದಲ್ಲಿ ನಟಿಸಿದ್ದು, ಬರುವ ಮೇ 24 ರಂದು ಬಿಡುಗಡೆಯಾಗಲಿದೆ.


ಸಂಬಂಧಿತ ಟ್ಯಾಗ್ಗಳು

Malaika Arora Marriage Arjun Kapoor Actor


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ