ಆಫೀಸಲ್ಲಿ ಕುಳಿತು ಕೆಲಸ ಮಾಡುವವರೇ ಎಚ್ಚರ..!

Physical activity may offset health

25-04-2019

ಇಂದಿನ ಕಾಲದಲ್ಲಿ ಬಹುತೇಕರೆಲ್ಲರಿಗೂ ಕೆಲಸ ಮಾಡಿ ಜೀವನ ನಡೆಸಬೇಕಾದ ಅನಿವಾರ್ಯತೆ. ಆದ್ರೆ ಆಫೀಸ್ ಗೆ ಹೋಗೋ ಭರಾಟೆಯಲ್ಲಿ ತಂತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸೋಕೆ ಬಹುತೇಕರಿಗೆ ಸಮಯವೇ ಇರೋದಿಲ್ಲ. ಅದರಲ್ಲೂ ಕೆಲಸದ ವೇಳೆಯಲ್ಲಿ ಅನೇಕರು ಕುಳಿತೇ ಕೆಲಸ ಮಾಡುತ್ತಾರೆ. ಆದ್ರೆ ದೇಹಕ್ಕೆ ವ್ಯಾಯಾಮ ಇಲ್ಲದೇ ಇರೋದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಹೌದು, ಸಿಡ್ನಿ ವಿಶ್ವವಿದ್ಯಾಲಯದಲ್ಲಿ ನಡೆದ ಸಂಶೋಧನೆಯಲ್ಲಿ ಈ ವಿಷಯ ಮತ್ತೆ ಸಾಬೀತಾಗಿದೆ. ದಿನದಲ್ಲಿ ಕನಿಷ್ಟ 150 ನಿಮಿಷದ ದೈಹಿಕ ಚಟುವಟಿಕೆ ಆರೋಗ್ಯ ಕಾಪಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತೆ. ವ್ಯಾಯಾಮ, ವಾಕಿಂಗ್ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.

ದೈಹಿಕ ಚಟುವಟಿಕೆಗಳಿಲ್ಲದೇ, ಹೆಚ್ಚಿನ ಸಮಯ ಕುಳಿತೇ ಕೆಲಸ ಮಾಡುವುದರಿಂದ ಅಕಾಲಿಕ ಮರಣ, ಹೃದಯಾಘಾತ ಸೇರಿದಂತೆ ಹತ್ತು ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ.

45 ವರ್ಷ ವಯಸ್ಸಿನ ಸುಮಾರು 1 ಲಕ್ಷ 50 ಸಾವಿರ ಜನರನ್ನು ಸಂಶೋಧನೆಗೊಳಪಡಿಸಿ ಈ ಅಧ್ಯಯನ ನಡೆಸಲಾಗಿದ್ದು, ದೈಹಿಕ ಚಟುವಟಿಕೆ ಉತ್ತಮ ಆರೋಗ್ಯಕ್ಕೆ ರಾಮಬಾಣ ಎಂದು ಹೇಳಲಾಗಿದೆ.


ಸಂಬಂಧಿತ ಟ್ಯಾಗ್ಗಳು

Exercise Walking Health Research


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ