ಇಂಡೋನೇಷ್ಯಾದಿಂದ ರಾಮಾಯಣ ಅಂಚೆ ಚೀಟಿ ಬಿಡುಗಡೆ

Ramayana Stamp released in Indonesia

24-04-2019

ಇಂಡೋನೇಷ್ಯಾ ದೇಶವು ರಾಮಾಯಣ ಸ್ಮರಣಾರ್ಥ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ. ಭಾರತ ಮತ್ತು ಇಂಡೋನೇಷ್ಯಾ ನಡುವಿನ ರಾಜತಾಂತ್ರಿಕ ಒಪ್ಪಂದ ಅಧಿಕೃತವಾಗಿ ಜಾರಿಗೆ ಬಂದು 70 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿದೆ.

ಅಂಚೆ ಚೀಟಿಯಲ್ಲಿ ಜಟಾಯು – ರಾವಣರ ಯುದ್ಧದ ಚಿತ್ರಕ್ಕೆ ಸ್ಥಾನ ಸಿಕ್ಕಿದೆ. ಜಕಾರ್ತದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ಅಂಚೆ ಚೀಟಿಯನ್ನು ಹಂಚಿಕೊಂಡಿದೆ. ಈ ಮೂಲಕ ಭಾರತದ ಪ್ರಾಚೀನ ಮಹಾಕಾವ್ಯಕ್ಕೆ ವಿದೇಶದಲ್ಲಿ ಗೌರವ ಸಿಕ್ಕಂತಾಗಿದೆ.


ಸಂಬಂಧಿತ ಟ್ಯಾಗ್ಗಳು

Ramayan Indonesia Culture India


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ