ವಿಚಾರಣೆಯಿಂದ ವಿನಾಯಿತಿ ಕೋರಿ ಮೆಹುಲ್ ಚೋಕ್ಸಿ ಅರ್ಜಿ

Mehul Choksi Requests Exemption

24-04-2019

ದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ 13,000 ಕೋಟಿ ರೂ. ಪಾವತಿಸಲು ಸಾಧ್ಯವಾಗದೆ ದೇಶ ತೊರೆದಿರುವ ಉದ್ಯಮಿ ಮೆಹುಲ್ ಚೋಕ್ಸಿ ವಿಚಾರಣೆಗೆ ಹಾಜರಾಗದೇ ಇರಲು ಅವಕಾಶ ಕೊಡಿ ಎಂದು ಬಾಂಬೆ ಹೈಕೋರ್ಟ್‍ಗೆ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಅನಾರೋಗ್ಯದ ಕಾರಣದಿಂದಾಗಿ ಪಾಟಿ ಸವಾಲಿನ ವೇಳೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ಕೋರಿದ್ದಾರೆ.

ಬಹುಕೋಟಿ ವಂಚನೆ ಪ್ರಕರಣದಡಿ ಆರೋಪಿಯಾಗಿ ದೇಶಭ್ರಷ್ಟರಾಗಿರುವ ಮೆಹುಲ್ ಚೋಕ್ಸಿಯವರನ್ನು ವಾಪಸ್ ಕರೆತರಲು ಸಿಬಿಐ ಯತ್ನಿಸುತ್ತಿದೆ. ಇಂಟರ್‍ಪೋಲ್ ರೆಡ್ ಕಾರ್ನರ್ ನೋಟಿಸ್ ಇಲ್ಲದೆ ಕೂಡ ಭಾರತಕ್ಕೆ ಅವರನ್ನು ಕರೆತರಬಹುದು ಎಂದು ಸಿಬಿಐ ವಿದೇಶಾಂಗ ಇಲಾಖೆಗೆ ಮನವರಿಕೆ ಮಾಡಿಕೊಟ್ಟಿತ್ತು.

ಆಂಟಿಗುವಾ ದೇಶದ ಪೌರತ್ವ ಪಡೆದಿರುವ ಚೋಕ್ಸಿ, ಆ ದೇಶದ ಪಾಸ್ ಪೋರ್ಟ್ ಕೂಡ ಹೊಂದಿದ್ದಾರೆ. ತಮ್ಮ ಮೇಲಿನ ಆರೋಪ ರಾಜಕೀಯ ಪ್ರೇರಿತ ಎಂದಿದ್ದ ಚೋಕ್ಸಿ ರೆಡ್‍ಕಾರ್ನರ್ ನೊಟೀಸ್ ಹೊರಡಿಸಬಾರದು ಎಂದು ಕೂಡ ಇಂಟರ್‍ಪೋಲ್‍ಗೆ ಮನವಿ ಮಾಡಿಕೊಂಡಿದ್ದರು.

ಈ ಎಲ್ಲ ಬೆಳವಣಿಗೆಗಳ ನಡುವೆ ಡಿಸೆಂಬರ್ 13, 2018ರಂದು ರೆಡ್‍ಕಾರ್ನರ್ ನೊಟೀಸ್‍ ಅನ್ನು ಇಂಟರ್‍ಪೋಲ್ ಜಾರಿಮಾಡಿತ್ತು. ಇದೀಗ ಅನಾರೋಗ್ಯದ ಕಾರಣದಿಂದಾಗಿ ವಿಚಾರಣೆಗೆ ಹಾಜರಾಗದೆ ಇರಲು ಅವಕಾಶ ಕೊಡಿ ಎಂದು ಚೋಕ್ಸಿ ಮನವಿ ಮಾಡಿಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Mehul Choksi Nirav Modi Fraud Modi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ