ಲೈಂಗಿಕ ದೌರ್ಜನ್ಯ ಆರೋಪ: ನ್ಯಾ. ಬೊಬ್ಡೆ ನೇತೃತ್ವದ ಆಂತರಿಕ ಸಮಿತಿ ರಚನೆ

Judge Heads Committee

24-04-2019

ದೆಹಲಿ: ಸರ್ವೋಚ್ಚ ನ್ಯಾಯಮೂರ್ತಿ ರಂಜನ್ ಗೊಗೋಯ್ ವಿರುದ್ಧ ಮಾಜಿ ಉದ್ಯೋಗಿ ಮಾಡಿದ್ದ ಲೈಂಗಿಕ ಕಿರುಕುಳ ಆರೋಪ ಕುರಿತು ತನಿಖೆ ನಡೆಸಲು ನ್ಯಾ. ಎಸ್ ಎ ಬೊಬ್ಡೆ ನೇತೃತ್ವದಲ್ಲಿ ಆಂತರಿಕ ಸಮಿತಿಯನ್ನು ರಚಿಸಲಾಗಿದೆ. ನ್ಯಾ. ಬೊಬ್ಡೆ ನೇತೃತ್ವದ ತನಿಖಾ ಸಮಿತಿಯಲ್ಲಿ ನ್ಯಾ. ಎನ್. ವಿ. ರಮಣ ಮತ್ತು ನ್ಯಾ. ಇಂದಿರಾ ಬ್ಯಾನರ್ಜಿಯವರು ಸದಸ್ಯರಾಗಿದ್ದಾರೆ.

ಮುಖ್ಯನ್ಯಾಯಮೂರ್ತಿ ನಿವಾಸದಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಉದ್ಯೋಗಿ ಆರೋಪಿಸಿದ್ದರು. 22 ನ್ಯಾಯಮೂರ್ತಿಗಳಿಗೆ ಈ ಕುರಿತು ಪ್ರಮಾಣ ಪತ್ರ ಸಹಿತ ಪತ್ರ ಬರೆದದ್ದು ದೇಶದ ನ್ಯಾಯಾಂಗ ಇತಿಹಾಸದಲ್ಲೇ ಅಪರೂಪದ ಘಟನೆಯಾಗಿತ್ತು. ಈ ಪ್ರಕತನದ ಕುರಿತು ವಿವರವಾಗಿ ತನಿಖೆ ನಡೆಸುವಂತೆ ಸಮಿತಿಯನ್ನು ರಚಿಸಲಾಗಿದೆ.

ಸಮಿತಿ ರಚನೆಯಾದ ನಂತರ ನ್ಯಾ. ಬೊಬ್ಡೆ ದೂರುದಾರರಿಗೆ ನೋಟೀಸ್ ನೀಡಿದ್ದು, ಶುಕ್ರವಾರ ಮೊದಲ ವಿಚಾರಣೆ ನಡೆಯಲಿದೆ. 


ಸಂಬಂಧಿತ ಟ್ಯಾಗ್ಗಳು

Gogoi SC Sexual Misconduct Court


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ