ಮತದಾನದ ಮಾಡುವುದು ಹೇಗೆ ಎಂದ ಗೂಗಲ್ ಡೂಡಲ್

Google Doodle on Election

23-04-2019

ದೆಹಲಿ: ದೇಶದಲ್ಲಿ ಮೂರನೇ ಹಂತದ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಜನ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಭಾರತದಲ್ಲಿ ಮತದಾನವನ್ನು ಹೇಗೆ ಮಾಡಬೇಕು? ಎಂಬ ಸಂಗತಿ ಎಡೆಗೆ ಜಗತ್ತಿನ ಅತ್ಯಂತ ದೊಡ್ಡ ಹುಡುಕು ತಾಣ (ಸರ್ಚ್ ಇಂಜಿನ್) ಗೂಗಲ್ ಡೂಡಲ್ ಮೂಲಕ ಅಭಿಯಾನ ನಡೆಸಿದೆ. ಇಂದು ಗೂಗಲ್ ಪುಟವನ್ನು ತೆರೆದವರಿಗೆ ಈ ಸಂಗತಿ ಕಂಡುಬರುತ್ತಿದೆ. ತೋರುಬೆರಳನ್ನು ಗೂಗಲ್ (google) ಮಾದರಿಯಲ್ಲಿ ಬರೆಯಲಾಗಿದ್ದು, ಮತದಾನದ ಕುರಿತು ಜಾಗೃತಿ ಮೂಡಿಸಲು ಯತ್ನಿಸಲಾಗಿದೆ.

ಇಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ (ವೈನಾಡ್ ಕ್ಷೇತ್ರ - ಕೇರಳ) ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ (ಗಾಂಧಿನಗರ್-ಗುಜರಾತ್) ಸ್ಪರ್ಧಿಸಿದ್ದು, ಅವರ ಭವಿಷ್ಯ ಇಂದೇ ನಿರ್ಧಾರವಾಗಲಿದೆ. ಮೇ 23ರಂದು ಮತ ಎಣಿಕೆ ನಡೆಯಲಿದೆ.


ಸಂಬಂಧಿತ ಟ್ಯಾಗ್ಗಳು

Google Doodle Election India


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ