ವಾರಾಣಸಿಯಲ್ಲಿ ಮೋದಿ ವರ್ಸಸ್ ಪ್ರಿಯಾಂಕ!

Modi vs Priyanka?

21-04-2019

ದೆಹಲಿ: ದೇಶಾದ್ಯಂತ ಪಕ್ಷವನ್ನು ಅಧಿಕಾರಕ್ಕೆ ತರಲು ಸುತ್ತುತ್ತಿರುವ ಪ್ರಧಾನಿ ಮೋದಿಯವರ ವಿರುದ್ಧ ಕಾಂಗ್ರೆಸ್‍ನಿಂದ ಪ್ರಿಯಾಂಕ ಗಾಂಧಿ ಸ್ಪರ್ಧಿಸುತ್ತಾರೆ ಎಂಬ ವದಂತಿಗಳು ಸಾಕಷ್ಟು ದಿನಗಳಿಂದ ಹರಿದಾಡುತ್ತಿವೆ. ಈ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಪ್ರಿಯಾಂಕ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹೇಳಿದರೆ, ನನಗೆ ವಾರಾಣಸಿಯಿಂದ ಸ್ಪರ್ಧಿಸಲು ಖಚಿಯಾಗುತ್ತದೆ ಎಂದರು. ಈ ಮೂಲಕ ವಾರಾಣಸಿಯ ಕುರಿತು ಇನ್ನಷ್ಟು ಕುತೂಹಲ ಬೆಳೆಯಲು ಕಾರಣರಾದು.

 

ಕಳೆದ ಎರಡು ದಶಕಗಳಿಂದ ಅಮೇಥಿ, ರಾಯ್ ಬರೇಲಿಯಲ್ಲಿ ತಾಯಿ ಮತ್ತು ಸೋದರನ ಗೆಲುವಿಗಾಗಿ ತೆರೆಮರೆಯಲ್ಲಿ ಶ್ರಮಿಸುತ್ತಿದ್ದ ಪ್ರಿಯಾಂಕ ಗಾಂಧಿ ಕಳೆದ ಫೆಬ್ರವರಿಯಲ್ಲಿ ಸಕ್ರಿಯ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. 2014ರಿಂದ ಪ್ರಿಯಾಂಕ ಅವರನ್ನು ಸಕ್ರಿಯ ರಾಜಕಾರಣಕ್ಕೆ ತರಬೇಕು ಎಂದು ಪಕ್ಷದ ಕಾರ್ಯಕರ್ತರು ಒತ್ತಾಯಿಸುತ್ತಲೇ ಇದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಈ ವಿಷಯ ಹೆಚ್ಚು ವ್ಯಾಪಕವಾಗಿ ಮುನ್ನೆಲೆಗೆ ಬಂದಿತ್ತು.


ಸಂಬಂಧಿತ ಟ್ಯಾಗ್ಗಳು

Priyanka Gandhi Rahul Gandhi Narendra Modi Kannada


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Priyanka spelling wrong here
  • K. S. Gowda
  • Professional
Best Alcohol Rehab Near Me Alcohol Rehab Centers Drug Rehab Centers Drug Rehab Suboxone Rehab http://aaa-rehab.com JamesBesee
  • JamesBesee
  • Construction, facilities