ಬಾಬ್ರಿ ಕೆಡವಿದ ಹೆಮ್ಮೆಯಿದೆ - ಸಾಧ್ವಿ ಪ್ರಗ್ಯ

Proud of demolishing Babri Masjid - Sadhvi Pragya

21-04-2019

ಭಯೋತ್ಪಾದನೆಯ ಆರೋಪ ಹೊತ್ತಿದ್ದರೂ ಬಿಜೆಪಿ ಟಿಕೆಟ್ ಪಡೆದುಕೊಳ್ಳಲು ಸಫಲರಾದ ಸಾಧ್ವಿ ಪ್ರಗ್ಯ ತನ್ನ ಶಾಪದಿಂದಲೇ ಉಗ್ರಗಾಮಿಗಳನ್ನು ಸದೆಬಡಿದ ಹೇಮಂತ್ ಕರ್ಕರೆ ಸತ್ತಿದ್ದು ಎಂದು ಹೇಳಿ ನಂತರ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿದ ಹಿನ್ನೆಲೆಯಲ್ಲೆ ಈಗ ಇನ್ನೊಂದು ಹೇಳಿಕೆಯನ್ನು ನೀಡಿ ಬಿಜೆಪಿಯನ್ನು ಪೇಚಿಗೆ ಸಿಲುಕಿಸಿದ್ದಾರೆ. 'ಬಾಬ್ರಿ ಮಸೀದಿಯನ್ನು ಕೆಡವಿದ್ದು ನಾನೇ. ಆ ಮಸೀದಿಯ ಗುಮ್ಮಟದೆ ಮೇಲೇರಿ ನಾನು ಅದನ್ನು ಕೆಡವಿ ದೇಶದ ಮೇಲಿದ್ದ ಕಳಂಕವನ್ನು ತೆಗೆದು ಹಾಕಿದೆ ಎಂದು ಹೇಳಿದ್ದಾರೆ.' ಮಸೀದಿ ಕೆಡವಿದ ವಿಚಾರ ಇನ್ನೂ ಕೋರ್ಟ್ ನಲ್ಲಿದೆ ಮತ್ತು ಅದು ಒಂದು ಅಪರಾಧವೆಂದು ಪರಿಗಣಿಸಲಾಗಿದೆ ಎಂಬುದನ್ನೂ ಲೆಕ್ಕಿಸದೆ ಈ ರೀತಿ ಪ್ರಗ್ಯ ಹೇಳಿಕೆ ನೀಡಿರುವುದು ಬಿಜೆಪಿಯವರಲ್ಲಿ ಆತಂಕ ಮೂಡಿಸಿದೆ. ಈ ರೀತಿ ಕಾನೂನು ಮತ್ತು ಸಂವಿಧಾನದ ಒಂದಿಷ್ಟೂ ಅರಿವಿಲ್ಲದವರು ಲೋಕಸಭೆಗೆ ಚುನಾಯಿಸಲ್ಪಟ್ಟರೆ ಪರಿಸ್ಥಿತಿ ಏನಾಗಬಹುದು ಎಂದು ಅರಿವಿರುವ ನಾಗರಿಕರು ಕೇಳುತ್ತಿದ್ದಾರೆ? ಚುನಾವಣಾ ಆಯೋಗ ಸಾಧ್ವಿ ಪ್ರಗ್ಯ ಅವರಿಗೆ ನೋಟಿಸ್ ನೀಡಿ ಉತ್ತರ ನೀಡಲು ಗಡುವು ನೀಡಿದೆ.


ಸಂಬಂಧಿತ ಟ್ಯಾಗ್ಗಳು

Babri BJP Pragya Terrorism


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Turning Point Drug Rehab Alcohol Rehab Centers Drug Rehab Alcohol Rehab Near Me Substance Abuse Diagnosis http://aaa-rehab.com JamesBesee
  • JamesBesee
  • Construction, facilities