ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ

Bomb blasts in Srilanka

21-04-2019

ಕ್ರೈಸ್ತರ ಹಬ್ಬವಾದ ಈಸ್ಟರ್ ಸಂದರ್ಭದಲ್ಲಿ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಶ್ರೀಲಂಕಾದ ರಾಜಧಾನಿಯ ಎರಡು ಚರ್ಚ್ಗಳಲ್ಲಿ ಬಾಂಬ್ ಸ್ಫೋಟವಾಗಿದೆ. ಹಾಗೇ ಕೆಲವು ಸ್ಟಾರ್ ಶ್ರೇಣಿಯ ಹೋಟೆಲ್ ಗಳಲ್ಲೂ ಬಾಂಬ್ ಸ್ಫೋಟವಾಗಿದೆ ಎಂದು ವರದಿಯಾಗಿದೆ. ಕೊಲಂಬೋದ ಸಮೀಪದಲ್ಲೇ ಇರುವ ನೆಗೊಂಬೊ ಎನ್ನುವಲ್ಲಿ ಕೂಡ ಬಾಂಬ್ ಸ್ಫೋಟವಾಗಿದೆ. ಈ ಸ್ಫೋಟದಲ್ಲಿ ಸುಮಾರು 130 ಜನ ಸತ್ತಿದ್ದು 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇದು ಕ್ರಿಶ್ಚಿಯನ್ನರ ವಿರುದ್ಧ ನಡೆದ ದಾಳಿಯೆಂದೂ ಹೇಳಲಾಗುತ್ತಿದೆ. ಅನೇಕ ವರ್ಷಗಳ ನಂತರ ಮತ್ತೊಮ್ಮೆ ಶ್ರೀಲಂಕಾ ಭಯೋತ್ಪಾದಕರ ದಾಳಿಗೆ ಒಳಗಾಗಿದ್ದು ಈ ಘಟನೆ ವಿಶ್ವದಾದ್ಯಂತ ಆತಂಕ ಮೂಡಿಸಿದೆ. 


ಸಂಬಂಧಿತ ಟ್ಯಾಗ್ಗಳು

Srilanka Bomb blast Terrorism South Asia


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ