ಮಂಡ್ಯದಲ್ಲಿ ನಿಖಿಲ್ ಗೆಲುವು?

Nikhil wins in Mandya?

20-04-2019

ಬಹಳ ಕುತೂಹಲ ಕೆರಳಿಸಿದ ಮಂಡ್ಯ ಲೋಕಸಭಾ ಚುನಾವಣೆ ದೇಶದಲ್ಲೇ ಜನರ ಗಮನವನ್ನು ಸೆಳೆದಿತ್ತು. ಸ್ವತಂತ್ರ ಅಭ್ಯರ್ಥಿ ಮತ್ತು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳ ನಡುವಿನ ಸಮರ ವಿವಿಧ ಮಜಲುಗಳನ್ನು ತಲುಪಿಯಾಗಿತ್ತು. ಏಪ್ರಿಲ್ ೧೮ರಂದು ನಡೆದ ಚುನಾವಣೆ ಜನರ ಒಲವು ಯಾರ ಪರ ಮತ್ತು ಆ ಒಲವು ಯಾವ ಕಾರಣದಿಂದಾಗಿ ಎಂದು ನಿರ್ಧರಿಸಿದರೂ ಇನ್ನೂ ಫಲಿತಾಂಶಕ್ಕಾಗಿ ಕಾಯಬೇಕಾಗಿದೆ. ಆದರೆ ಈಗಾಗಲೇ ಜನ ಮಾತನಾಡಿಕೊಳ್ಳುತ್ತಿರುವ ಧಾಟಿಯನ್ನು ನೋಡಿದರೆ ಬಹುತೇಕ ಈ ಫಲಿತಾಂಶ ನಿಖಿಲ್ ಪರ ಬರುತ್ತದೆಂದು ಹೇಳಲಾಗುತ್ತಿದೆ. ಆ ಕಾರಣದಿಂದಲೆ ಸಿಎಂ ಕುಮಾರಸ್ವಾಮಿಯವರ ಮುಖದ ಮೇಲೆ ಆವರಿಸಿಕೊಂಡಿದ್ದ ಕಾರ್ಮೋಡ ಕಣ್ಮರೆಯಾಗಿ ಈಗ ಮಂದಹಾಸ ಕಾಣಿಸಲು ಆರಂಭವಾಗಿದೆ. ಮಂಡ್ಯ ಚುನಾವಣೆಯನ್ನು ತಮ್ಮ ಪ್ರತಿಷ್ಠೆಯ ದ್ಯೋತಕತಕವಾಗಿ ಕಂಡ ಕುಮಾರಸ್ವಾಮಿ ಶತಾಯ ಗತಾಯ ಮಗನನ್ನು ಗೆಲ್ಲಿಸಬೇಕೆಂದು ಪಣ ತೊಟ್ಟಿದ್ದರು, ಆ ಕಾರಣದಿಂದ ಕಾಂಗ್ರೆಸ್ ಪಕ್ಷಕ್ಕೂ ಬಹಳಷ್ಟು ಧಮ್ಕಿ ನೀಡಲಾಗಿತ್ತು. ಕಾಂಗ್ರೆಸ್ ಭಿನ್ನಮತೀಯರೂ ಕೂಡ ಕೊನೆ ಗಳಿಗೆಯಲ್ಲಿ ದಾರಿಗೆ ಬಂದರು ಮಾತ್ರವಲ್ಲದೆ ಚುನಾವಣೆಗೆ ಮೊದಲು ಹಣದ ಹೊಳೆಯೇ ಹರಿಯಿತು ಎಂದೂ ಹೇಳಲಾಗುತ್ತಿದೆ. ಈ ಎಲ್ಲ ಅಂಶಗಳು ನಿಖಿಲ್ ಪರವಾಗಿಯೇ ಕೆಲಸ ಮಾಡಿದವು ಎನ್ನಲಾಗಿದೆ. ನಿಖಿಲ್ ಗೆದ್ದರೆ ಲಾಭವೆಲ್ಲ ಕುಮಾರಸ್ವಾಮಿಯವರದ್ದು ಆದರೆ ಸುಮಲತಾ ಸೋತರೆ ನಷ್ಟವೆಲ್ಲ ಅಂಬರೀಷ್ ಕುಟುಂಬದ್ದು ಎನ್ನಲಾಗುತ್ತಿದೆ. 


ಸಂಬಂಧಿತ ಟ್ಯಾಗ್ಗಳು

Nikhil Kumaraswamy Kumaaraswamy JDS Congress


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ