ವೀರಶೈವ – ಲಿಂಗಾಯತದಲ್ಲಿ ಸೋನಿಯಾ ಹಸ್ತಕ್ಷೇಪ: ಬಿ ಎಸ್ ವೈ

Veerashaivism - lingayatadalli Sonia

20-04-2019

ಶಿವಮೊಗ್ಗ: ಸಿಎಂ ಕುಮಾರಸ್ವಾಮಿಯವರಿಗೆ ಪುಲ್ವಾಮಾ ದಾಳಿಯ ಕುರಿತು ಎರಡು ವರ್ಷ ಮೊದಲೇ ಗೊತ್ತಿದ್ದರೆ, ಅವರು ಪೊಲೀಸರಿಗೆ ಮತ್ತು ರಾಷ್ಟ್ರಪತಿಗಳಿಗೆ ಮಾಹಿತಿ ನೀಡಬೇಕಿತ್ತು. ಇದರಿಂದ ನಮ್ಮ 40ಕ್ಕೂ ಹೆಚ್ಚು ಸೈನಿಕರ ಸಾವನ್ನು ತಡೆಯಬಹುದಿತ್ತು ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಸುಮಲತಾ ಅವರು ಜಯಗಳಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಒಂದು ವಾರಗಳ ಕಾಲ ಅವರು (ಕುಮಾರಸ್ವಾಮಿ) ಅಲ್ಲೇ (ಮಂಡ್ಯ) ಇದ್ದರು. ಅನಂತರ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡರು ಮತ್ತು ಅಸಂಬದ್ಧ ಮಾತುಗಳನ್ನು ಹೇಳತೊಡಗಿದರು ಎಂದರು.

ಯಡಿಯೂರಪ್ಪ ಡೈರಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಷಯದಲ್ಲಿ ಸಣ್ಣ ಪ್ರಮಾಣದ ಸತ್ಯ ಇದ್ದರೂ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ. ಅಧಿಕಾರಿಗಳು ಮತ್ತು ತಜ್ಞರು ನನ್ನ ಹಸ್ತಾಕ್ಷರ ಮತ್ತು ಬರವಣಿಗೆಯನ್ನು ಪರಿಶೀಲಿಸಿದ್ದಾರೆ ಮತ್ತು ಅದರಲ್ಲಿರುವುದು ನನ್ನ ಸಹಿಯಲ್ಲ ಎಂದಿದ್ದಾರೆ. ಅದು ಡೈರಿಯಲ್ಲ 2-3 ಬಿಡಿ ಪುಟಗಳು ಮಾತ್ರ ಎಂದರು.

ವೀರಶೈವ – ಲಿಂಗಾಯತ ವಿಷಯದ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರು ಮತ್ತು ಗೃಹ ಸಚಿವ ಎಂ ಬಿ ಪಾಟೀಲ್ ಎಐಸಿಸಿ ಮುಖ್ಯಸ್ಥೆ ಸೋನಿಯಾ ಗಾಂಧಿಯವರಿಗೆ ವೀರಶೈವ – ಲಿಂಗಾಯತ ವಿಷಯದ ಕುರಿತು ಪತ್ರ ಬರೆದಿದ್ದರು. ಇದು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಿರುವಂತೆ ನಡೆಸಿದ ಪಿತೂರಿ. ಈ ಪಿತೂರಿಯಲ್ಲಿ ಸೋನಿಯಾ ಗಾಂಧಿಯವರು ಒಳಗೊಂಡಿರುವುದು ಅಚ್ಚರಿಯ ಸಂಗತಿ. ಪಾಟೀಲ್ ಅವರು ನಿಮ್ಮ ಸಲಹೆಯಂತೆ ಪತ್ರ ಕಳುಹಿಸಿದ್ದೇನೆ ಎಂದಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೋನಿಯಾ ಅವರಿಂದ ಮಾರ್ಗದರ್ಶನ ಸಿಕ್ಕಿತ್ತು ಎಂಬುದು ಇದರರ್ಥ. ರಾಷ್ಟ್ರೀಯ ಪಕ್ಷದ ಮುಖ್ಯಸ್ಥರಾಗಿ ಮತ್ತು ನೆಹರು ಮನೆತನದ ಘನತೆಯ ಹಕ್ಕನ್ನು ಪ್ರತಿಪಾದಿಸುವರು, ಇಂತಹ ಕೃತ್ಯಕ್ಕೆ ಇಳಿಯಬಾರದು. ಏಕೆಂದರೆ, ನಮಗೆ ನೆಹರು ಮತ್ತು ಅವರ ಕುಟುಂಬದವರ ಮೇಲೆ ಗೌರವವಿದೆ. ಇಂತಹ ಪಿತೂರಿಗಳನ್ನು ಮಾಡುವುದು ಕಾಂಗ್ರೆಸ್ಗೆ ಹೊಸದಲ್ಲ ಎಂದರು.

ಕಾಂಗ್ರೆಸ್ನ ಎಲ್ಲ ಒಡೆಯುವ ತಂತ್ರಗಳ ನಡುವೆ ಕೂಡ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಈ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಭಾರೀ ಅಂತರದಿಂದ ಗೆಲ್ಲುವುದು ಶೇ. 100ರಷ್ಟು ಖಚಿತ. ಜೊತೆಗೆ ಕರ್ನಾಟಕದಲ್ಲಿ 22 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

lingayatadalli lingayatadalli Veerashaivism Veerashaivism


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ