ಜೆಟ್ ಏರ್ವೇಸ್ ಧರೆಗುರುಳಿದು ಹೇಗೆ?

How Jet Airways Strikes Back..?

20-04-2019

ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಪತನವಾದದ್ದು ಹೇಗೆ?

ಈ ವಿಮಾನ ಯಾನ ಸಂಸ್ಥೆಯ ಮೊದಲ ವಿಮಾನ ಹಾರಾಟ ಆರಂಭಿಸಿ 26 ವಸಂತಗಳೇ ಉರುಳಿವೆ. ಭಾರತದ ಪುರಾತನ ವಿಮಾನಯಾನ ಸಂಸ್ಥೆಗೆ ಸುರುಳಿ ಸುತ್ತುವ ಕೆಲಸ ನಡೆದಿದೆ. ಹೌದು, ಈ ದುರಂತ ಸಂಭವಿಸಿರುವುದು ಜೆಟ್ ಏರ್ವೇಸಸ್ಗೆತ. ಈ ವಿಮಾನಯಾನ ಸಂಸ್ಥೆ ಕಳೆದ ಬುಧವಾರ ತನ್ನ ಎಲ್ಲ ನಿಗದಿತ ವಿಮಾನ ಯಾನದ ಟ್ರಿಪ್ಗೇಳನ್ನು ರದ್ದುಗೊಳಿಸಿರುವುದಾಗಿ ಘೋಷಿಸಿತು. ಅಚ್ಚರಿಯ ಸಂಗತಿ ಎಂದರೆ, ಭಾರತದಲ್ಲಿ ಇದೇ ವಿಮಾನಯಾನ ಸಂಸ್ಥೆಯೇ ವಿಮಾನಯಾನ ಕೈಗಾರಿಕೆಯ ಬೆಳವಣಿಗೆಗೆ ವರ್ಷಗಳಿಂದ ದುಡಿದಿತ್ತು. ಆದರೆ, ಗತಕಾಲ ಪಳೆಯುಳಿಕೆಯಾಗುವತ್ತ ಜೆಟ್ ಏರ್ವೇರಸ್ ಹೊರಳಿದೆ.

 

ಹೆಮ್ಮೆಯ ಈ ವಿಮಾನಯಾನ ಸಂಸ್ಥೆಯನ್ನು ಸ್ಥಾಪಿಸಿದ್ದು ನರೇಶ್ ಗೋಯಲ್. ಇವರು ಲೆನೀಸ್ ಏರ್ಲೈನ್ಸ್ನಲ್ಲಿ ಸೇಲ್ಸ್ ಏಜೆಂಟ್ ಆಗಿ 1967ರಲ್ಲಿ ತಮ್ಮ ಉದ್ಯೋಗವನ್ನು ಆರಂಭಿಸಿದ್ದರು. ಜೊತೆಗೆ ಅವರು ಇನ್ನಿತರ ಏರ್ಲೈನ್ಸ್ ಕಂಪನಿಗಳಲ್ಲಿ ಕೂಡ ದಶಕಗಟ್ಟಲೇ ದುಡಿದರು. ಅಂತಿಮವಾಗಿ 1974ರಲ್ಲಿ ಜೇಟ್ಏರ್ ಸಂಸ್ಥೆಯನ್ನು ಸ್ಥಾಪಿಸಿದರು. ಈ ಕಂಪನಿ ಭಾರತದಲ್ಲಿ ಮಾರಾಟ ಮತ್ತು ಮಾರುಕಟ್ಟೆ ಸೇವೆಯನ್ನು ವಿದೇಶದ ಕಂಪನಿಗಳಿಗೆ ಒದಗಿಸುತ್ತಿತ್ತು.

1991ರಲ್ಲಿ ಉದಾರೀಕರಣ ನೀತಿಯಿಂದಾಗಿ ಖಾಸಗಿ ಕಂಪನಿಗಳಿಗೆ ಲಾಭವಾಯಿತು. 1993ರಲ್ಲಿ ಜೆಟ್ ಏರ್ವೇಸ್ಗೆ ಗೋಯಲ್ ಅಧಿಕೃತವಾಗಿ ಚಾಲನೆ ನೀಡಿದರು. ನಂತರದ 2 ದಶಕಗಳಲ್ಲಿ ಈ ಸಂಸ್ಥೆ ಭಾರತದ ಟಾಪ್ ಏರ್ಲೈನ್ಸ್ ಆಗಿ ಬೆಳೆಯಿತು. ಇದರೊಂದಿಗೆ ಸಿಂಗಪುರ, ಲಂಡನ್, ಆಮ್ಸ್ರ್ಡ್ಯಾಮ್ ಗಳಿಗೆ ಸಂಪರ್ಕವನ್ನೂ ಸಾಧಿಸಿತು.

ಗೋಯಲ್ ಅವರು, ಏರ್ಲೈನ್ಸ್ ಅನ್ನು ಮಹತ್ವಾಕಾಂಕ್ಷೆ ಮತ್ತು ಆದರ್ಶಗಳೊಂದಿಗೆ ಸ್ಥಾಪಿಸಿದ್ದರು. ಜೊತೆಗೆ ತಮ್ಮ ಸಂಸ್ಥೆಯಲ್ಲಿ ಅತ್ಯುತ್ತಮ ಗುಣಮಟ್ಟದ ಸೇವೆಯನ್ನೂ ಅವರು ಒದಗಿಸಿದರು.

2000ನೇ ಇಸವಿಗೂ ಮುನ್ನ ಸ್ಪೈಸ್ಜೆಟ್ ಮತ್ತು ಇಂಡಿಗೋದಂತಹ ವಿಮಾನಯಾನ ಸಂಸ್ಥೆಗಳು ಈ ಉದ್ಯಮಕ್ಕೆ ಕಾಲಿಡುವ ಮುನ್ನ ದರ ಇಳಿಕೆಗೆ ಅವಕಾಶವೇ ಇರಲಿಲ್ಲ. ಆದರೆ, ನೂತನ ವಿಮಾನಯಾನ ಸಂಸ್ಥೆಗಳು ಕಾಲಿಟ್ಟ ನಂತರ ದರ ಸಮರಕ್ಕೆ ವೇದಿಕೆ ಸಿದ್ಧವಾಗಿತ್ತು.

ಇನ್ನು ಕೆಲವು ವರ್ಷಗಳ ನಂತರ ಹೊಸ ಸವಾಲುಗಳು ವಿಮಾನಯಾನ ಸಂಸ್ಥೆಗೆ ಎದುರಾದವು. ಭಾರತದ ವಿಮಾನ ನಿಲ್ದಾಣಗಳು ಸಂಕುಚಿತವಾಗತೊಡಗಿದವು. ವಿದೇಶಿ ವಿಮಾನಯಾನ ಸಂಸ್ಥೆಗಳು ಅಂತಾರಾಷ್ಟ್ರೀಯ ಮಾರ್ಗದ ಪ್ರಯಾಣಿಕರಿಗೆ ಸವಾಲಿನ ದರವನ್ನು ನೀಡುವ ಮೂಲಕ ಕಠಿಣ ಪರಿಸ್ಥಿತಿಯನ್ನು ನಿರ್ಮಿಸಿದವು. ಇದರೊಂದಿಗೆ ಸರ್ಕಾರ ವಿಧಿಸಿದ ಇಂಧನದ ಮೇಲಿನ ತೆರಿಗೆಯ ದರ ಕೂಡ ಸೇರಿಕೊಂಡಿತು. ಇದು ಸದ್ಯದ ಭಾರತದ ವಿಮಾನಯಾನ ಸಂಸ್ಥೆಗಳ ಸಮಸ್ಯೆಗೆ ದೊಡ್ಡ ಸವಾಲಾಗಿದೆ.

ಇಂತಹ ಬೆಳವಣಿಗೆಗಳಿಂದ ಜೆಟ್ ಏರ್ವೇಸ್ ಬರೋಬ್ಬರಿ 1.2 ಬಿಲಿಯನ್ ಸಾಲವನ್ನು  ತನ್ನ ತಲೆಮೇಲೆಳೆದುಕೊಂಡಿತು. ಈ ನಡುವೆ 2013ರಲ್ಲಿ ಇದೇ ಕಂಪನಿಯ ಶೇ. 24ರಷ್ಟು ಷೇರುಗಳನ್ನು ಅಬುದಾಬಿಯ ಇತಿಹಾದ್ ಏರ್ವೇಸ್ ಖರೀದಿಸಿತು. ಬೇಡಿಕೆ ಪೂರೈಸಲು ಜೆಟ್ ಏರ್ವೇಸ್ ಹೊಸದಾಗಿ 100 ವಿಮಾನಗಳ ಖರೀದಿಗೂ ಮುಂದಾಯಿತು. 

ಆರ್ಥಿಕ ಏರಿಳಿತ, 2018ರಲ್ಲಿ ಸಾರ್ವಕಾಲಿಕ ಮಟ್ಟಕ್ಕೆ ಭಾರತದ ರೂಪಾಯಿ ಮೌಲ್ಯ ಕುಸಿತ, ತೈಲಬೆಲೆ ಸಾರ್ವಕಾಲಿಕ ಏರಿಕೆ ಕಂಡ ಸಂಗತಿಗಳು ಅತಿದೊಡ್ಡ ಅಡಚಣೆಯಾಗಿ ಪರಿಣಮಿಸಿದವು. ಇವೆಲ್ಲ ಕಾರಣಗಳಿಂದಾಗಿ ಜೆಟ್ ಏರ್ವೇಸ್ ತನ್ನ ನೌಕರರಿಗೆ ವೇತನ ಪಾವತಿ ಮತ್ತು ಸಾಲಗಾರರರಿಗೆ ಹಣ  ಪಾವತಿಸುವುದು ತ್ರಾಸದಾಯಕವಾಯಿತು. ಇದೇ ವರ್ಷದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಕಡೆಗೆ ವಿಮಾನ ನಿಲ್ದಾಣಗಳ ಗುತ್ತಿಗೆ ಕಂಪನಿಗಳಿಗೆ ಬಾಡಿಗೆ ಕೊಡಲು ಕೂಡ ಜೆಟ್ ಸಂಸ್ಥೆ ವಿಫಲವಾಯಿತು.  

ವಿಮಾನ ನಿಲ್ದಾಣದಲ್ಲಿ ಇಳಿದ ವಿಮಾನ ನಿಲ್ದಾಣದಿಂದ ಹೊರಕ್ಕೆ ಹಾರಲು ಕೂಡ ಕಷ್ಟಕರ ಪರಿಸ್ಥಿತಿ ಈ ಸಂಸ್ಥೆಗೆ ಬಂದುಬಿಟ್ಟಿತು. ಇವೆಲ್ಲ ಬೆಳವಣಿಗೆಗಳಿಂದಾಗಿ 2 ದಶಕಗಳಿಂದ ಸಂಸ್ಥೆಯನ್ನು ಕಟ್ಟಿದ್ದ ಗೋಯಲ್ ಅವರ ಮೇಲೆ ಸಂಸ್ಥೆಯಿಂದಲೇ ಹೊರಹೋಗುವಂತೆ ಕಳೆದ ವರ್ಷ ಒತ್ತಡ ಹೇರಲಾಯಿತು. ಕಡೆಗೆ ಭಾರತ ಸರ್ಕಾರದ ಎಸ್ಬಿಗಐ ಇದರ ಮೇಲೆ ಹಿಡಿತ ಸಾಧಿಸಿತು.  

ಆದರೆ, ಇದನ್ನು ಉಳಿಸಿಕೊಳ್ಳಲು ಬ್ಯಾಂಕ್ ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ಮೇ 10ರ ಒಳಗೆ ಕಂಪನಿಯನ್ನು ಸಂಕಷ್ಟದ ಸಮಯದಲ್ಲಿ ರಕ್ಷಿಸುವ ಭರವಸೆ ಹೊಂದಿದ್ದವು. ಆದರೆ, ಅವುಗಳು ಹೆಚ್ಚು ಕಾಲ ಕಾಯುವಿಕೆಯ ನಂತರ ಕೂಡ ಜೆಟ್ ಏರ್ವೇಸ್ ಉಳಿಯವುದು ಕಷ್ಟ ಸಾಧ್ಯ ಎಂದು ಹೇಳಲಾಯಿತು. 

ಇವೆಲ್ಲದರ ದುಷ್ಪರಿಣಾಮ ಜೆಟ್ ಏರ್ವೇಸ್ನ ಷೇರಿನ ಮೇಲೆ ಕೂಡ ನಕಾರಾತ್ಮಕ ಪರಿಣಾಮ ಬೀರಿದ್ದು, ಗುರುವಾರ ಶೇ. 30ರಷ್ಟು ಕುಸಿತ ಕಂಡಿದೆ. ಕಂಪನಿ 2005ರಲ್ಲಿ ಷೇರು ಮಾರುಕಟ್ಟೆಗೆ ಕಾಲಿಟ್ಟಾಗ ಇದರ ಪ್ರತಿಯೊಂದು ಷೇರಿನ ಬೆಲೆ 1,100 ರೂಪಾಯಿಯಾಗಿತ್ತು. ಆದರೆ, ಇದೀಗ ಇದರ 1 ಷೇರಿನ ಬೆಲೆ ಕೇವಲ 164 ರೂ.ಗೆ ಕುಸಿದಿದೆ.

ಜೆಟ್ ಪ್ರಯಾಣ ನಿಲ್ಲಿಸಿದ ನಂತರ ಅದರ ನಷ್ಟದ ಪ್ರಮಾಣದಲ್ಲಿ ನಿರಂತರ ಏರಿಕೆಯಾಗುತ್ತದೆ. ಇದನ್ನು ನಷ್ಟದಿಂದ ಮೇಲೆತ್ತಲು ಭಗೀರಥ ಪ್ರಯತ್ನವೇ ಬೇಕಾಗುತ್ತದೆಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ