ಸರದಿ ಮುರಿದ ಮಣಿಪುರ ಸಿಎಂ, ರಾಜ್ಯಪಾಲೆ

The rotation of the broken Manipal CM, Governor

19-04-2019

ಇಂಫಾಲ: ಮಣಿಪುರ ರಾಜ್ಯಪಾಲೆ ನಜ್ಮಾ ಹೆಫ್ತುಲ್ಲಾ ಮತ್ತು ಸಿಎಂ ಎನ್ ಬಿರೇನ್ ಸಿಂಗ್ ಇನ್ನರ್(ಆಂತರಿಕ) ಮಣಿಪುರ ಲೋಕಸಭೆ ಕ್ಷೇತ್ರದ ಚುನಾವಣೆಯ ವೇಳೆ ಮತದಾನ ಮಾಡುವಾಗ ಸರದಿ ಮುರಿದಿದ್ದಾರೆ. ಅವರು ಮತದಾನಕ್ಕೆ ಆಗಮಿಸಿದ ವೇಳೆ ಮತಗಟಗಟ್ಟೆಯಲ್ಲಿ ಜನ ಮತದಾನ ಮಾಡಲು ಸರದಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಬೂತ್ಗೆ ಆಗಮಿಸಿದ ನಜ್ಮಾ ಹೆಫ್ತುಲ್ಲ ಮತ್ತು ಬಿರೇನ್ ಸಿಂಗ್ ಸರದಿ ಮುರಿದು ಮತದಾನ ಮಾಡಿದ್ದಾರೆ. 
ಈ ವೇಳೆ ಸರದಿ ಸಾಲಿನಲ್ಲಿ ನಿಂತಿದ್ದ ಜನ, ಅನೇಕ ರಾಜಕಾರಣಿಗಳು ಜನ ಸಾಮಾನ್ಯರೊಂದಿಗೆ ಸರದಿ ಸಾಲಿನಲ್ಲಿ ನಿಂತು ತಾಳ್ಮೆಯಿಂದ ಮತದಾನ ಮಾಡಿದ್ದಾರೆ ಎಂದು ಮಾತನಾಡಿಕೊಂಡರು.
ಸಗೋಲ್ ಬಂದ್ ವಿಧಾನಸಭೆ ಕ್ಷೇತ್ರದಲ್ಲಿ ಮತದಾನ ಮಾಡಿದ ನಂತರ ಪ್ರತಿಕ್ರಿಯಿಸಿದ ನಜ್ಮಾ, ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ಎಲ್ಲ ಮತದಾರರು ತಮ್ಮ ಸಂಸದರನ್ನು ಆಯ್ಕೆ ಮಾಡಲು ಮತ ಹಾಕಬೇಕು ಎಂದು ಮನವಿ ಮಾಡಿದರು. 
ಸಿಎಂ ಬಿರೇನ್ ಸಿಂಗ್ ಮತ್ತು ಅವರ ಪತ್ನಿ ಹಿಯಾನ್ಗಂೇಗ್ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಮಾಡಿದರು. 
ಇನ್ನರ್ ಮಣಿಪುರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 9.8 ಲಕ್ಷ ಮತದಾರರಿದ್ದು, 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಔಟರ್ (ಬಾಹ್ಯ) ಮಣಿಪುರ ಲೋಕಸಭೆ ಕ್ಷೇತ್ರದ ಚುನಾವಣೆ ಏಪ್ರಿಲ್ 11ರಂದು ನಡೆಯಲಿದೆ.


ಸಂಬಂಧಿತ ಟ್ಯಾಗ್ಗಳು

Governor cm Manipal cm


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ