ಮೋದಿಯಿಂದ ದೇಶಭಕ್ತಿ ಕಲಿಯಬೇಕಿಲ್ಲ: ಸಿಎಂ

Modi should learn patriotism: CM

19-04-2019

ಬೆಂಗಳೂರು: ಪ್ರಧಾನಿ ಮೋದಿಯವರು ನಾನು ದೇಶಭಕ್ತನಲ್ಲ ಎನ್ನುತ್ತಾರೆ. ಮೋದಿಯವರಿಂದ ನಾನು ದೇಶಭಕ್ತಿಯನ್ನು ಕಲಿಯಬೇಕಿಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು. ಜೊತೆಗೆ ದೇವೇಗೌಡರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಕಾಶ್ಮೀರದಲ್ಲಿ ಒಂದೇ ಒಂದು ಸ್ಫೋಟ ಸಂಭವಿಸಿಲ್ಲ. ಅದು ನಮ್ಮ ಪರಂಪರೆ. ಆದ್ದರಿಂದ ನನಗೆ ಹಣೆಪಟ್ಟಿ ಕಟ್ಟಬೇಡಿ ಎಂದು ಅವರು ತಿರುಗೇಟು ನೀಡಿದರು.

ದೇವೇಗೌಡರು ತಮ್ಮ ಪತ್ನಿಯನ್ನು ಚುನಾವಣೆಗೆ ನಿಲ್ಲಿಸುತ್ತಾರೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಜಗದೀಶ್ ಶೆಟ್ಟರ್ ಅವರ ಹೇಳಿಕೆಯಿಂದ ನನಗೆ ನೋವುಂಟಾಗಿದೆ. ನನ್ನ ತಾಯಿ ರಾಜಕಾರಣಿಯಲ್ಲ. ಆದರೆ, ತಮ್ಮ 80 ವರ್ಷಗಳ ಅವಧಿಯಲ್ಲಿ ಯಾವುದೇ ರಾಜಕೀಯ ಮಹತ್ವಾಕಾಂಕ್ಷೆ ಇಲ್ಲದೇ ಬಡವರಿಗಾಗಿ ಕೆಲಸ ಮಾಡಿದ್ದಾರೆ ಎಂದರು.


ಸಂಬಂಧಿತ ಟ್ಯಾಗ್ಗಳು

cm cm cm cm


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ