ಗಂಡ ಕಪ್ಪು ಎಂದು ಬೆಂಕಿ ಹಚ್ಚಿದ ಮಹಿಳೆ

Husband block woman on fire

19-04-2019

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಕಳೆದ ಸೋಮವಾರ ಉತ್ತರಪ್ರದೇಶದ ಬರೇಲಿಯಲ್ಲಿ ಮಹಿಳೆಯೊಬ್ಬಳು ತನ್ನ ಪತಿಯ ಮೈಬಣ್ಣ ಇಷ್ಟವಾಗದೇ ಬೆಂಕಿಹಚ್ಚಿದ್ದಾಳೆ. ಪತಿ ಸತ್ವೀರ್ ಸಿಂಗ್ ಮಲಗಿದ್ದ ವೇಳೆ, ಪತ್ನಿ ಪ್ರೇಮ್ ಶ್ರೀ ಬೆಂಕಿ ಹಚ್ಚಿದ್ದಾಳೆ. ಇದಕ್ಕೆ ಕಾರಣ ಪತಿಯ ಮೈಬಣ್ಣ ಕಪ್ಪಾಗಿರುವುದು. 

ಈ ಕುರಿತು ಪ್ರತಿಕ್ರಿಯಿಸಿರುವ ಸತ್ವೀರ್ ಸಿಂಗ್ ಸೋದರ, ಹರ್ವೀರ್, ಪ್ರೇಮ್ ಶ್ರೀ ಸತತವಾಗಿ ತನ್ನ ಸೋದರನ ಮೈಬಣ್ಣದ ಕುರಿತು ಅವಹೇಳನ ಮಾಡುತ್ತಿದ್ದರು.  ಇಂತಹ ಕುಕೃತ್ಯವನ್ನು ಎಸಗುತ್ತಾರೆ ಎಂದು ನಾವೆಂದೂ ಯೋಚಿಸಿರಲಿಲ್ಲ ಎಂದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಅಂದಹಾಗೆ ಈ ಜೋಡಿ ಕಳೆದ 2 ವರ್ಷಗಳ ಹಿಂದೆ ವಿವಾಹವಾಗಿತ್ತು. ಈಗ ಇವರಿಗೆ 5 ತಿಂಗಳ ಹೆಣ್ಣು ಮಗುವಿದೆ. 

ಈ ಘಟನೆ ಕುರಿತು ಹೇಳಿಕೆ ನೀಡಿರುವ ಇನ್ಸ್ಪೆಕ್ಟರ್ ಸಹದೇವ ಸಿಂಗ್, ಸೆಕ್ಷನ್ 307(ಕೊಲೆಯತ್ನ) ಅಡಿ ಪ್ರಾಥಮಿಕವಾಗಿ ಎಫ್ಐಆರ್ ದಾಖಲಿಸಲಾಗಿದೆ. ಸತ್ವೀರ್ ಸಿಂಗ್ ದೇಹ ಬೆಂಕಿಯಿಂದ ದಹನಕ್ಕೆ ಒಳಗಾಗಿದೆ. ಈ ಪ್ರಕರಣವನ್ನು ಸೆಕ್ಷನ್ 302 (ಕೊಲೆ)ಗೆ ಬದಲಿಸಲಾಗಿದೆ ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

fire fire fire fire


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ