ಕಾಂಗ್ರೆಸ್ ಬೆಂಬಲಿಸಿದ ಮುಖೇಶ್ ಅಂಬಾನಿ

Congress supported the Mukesh Amban

19-04-2019

ಮುಂಬಯಿ: ದೇಶದ ಬೃಹತ್ ಉದ್ಯಮಿ ಮುಖೇಶ್ ಅಂಬಾನಿಯವರು ಮುಂಬಯಿ ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದೇವೊರಾ ಅವರನ್ನು ಬೆಂಬಲಿಸಿದ್ದಾರೆ. ಮಿಲಿಂದ್ ದಕ್ಷಿಣ ಮುಂಬಯಿಗೆ ಸೇರಿದವರು. ಹತ್ತು ವರ್ಷಗಳಿಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅವರಿಗೆ ಕ್ಷೇತ್ರದ ಸಮಗ್ರ ಪರಿಚಯವಿದೆ ಎಂದು ಮುಖೇಶ್ ಹೇಳಿದ್ದಾರೆ. ಜೊತೆಗೆ, ಕ್ಷೇತ್ರದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ, ಆರ್ಥಿಕ ಸ್ಥಿತಿಗತಿಗಳ ಕುರಿತು ಆಳವಾದ ತಿಳಿವಳಿಕೆ ಹೊಂದಿದ್ದಾರೆ ಎಂದು ಕೂಡ ಮಿಲಿಂದ್ ಅವರ ಅನುಭವದ ಕುರಿತು ಅವರು ಹೊಗಳಿದ್ದಾರೆ. 

ಮುಖೇಶ್ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ತಮಗೆ ಬೆಂಬಲ ನೀಡಿರುವ ಹೇಳಿಕೆಯನ್ನು ಒಳಗೊಂಡಿರುವ 137 ಸೆಕೆಂಡ್ಗಳ ವಿಡಿಯೊವೊಂದನ್ನು ಮಿಲಿಂದ್ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಮುಖೇಶ್ ಅಂಬಾನಿ ಹಾಗೂ ಬ್ಯಾಂಕ್ ಉದ್ಯಮಿ ಉದಯ್ ಕೋಟಕ್ ಮೆಚ್ಚುಗೆ ವ್ಯಕ್ತಪಡಿಸಿರುವ ಸಂಗತಿಗಳು ದಾಖಲಾಗಿವೆ. 2004ರಿಂದ 14ರವರೆಗೆ ಸತತ ಎರಡು ಬಾರಿ ದಕ್ಷಿಣ ಮುಂಬಯಿ ಕ್ಷೇತ್ರವನ್ನು ಮಿಲಿಂದ್ ಪ್ರತಿನಿಧಿಸಿದ್ದರು. ಆದರೆ, ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ ಅವರು ಪರಾಜಯ ಹೊಂದಿದ್ದರು.  

ಕುತೂಹಲಕರ ಸಂಗತಿ ಎಂದರೆ, ಮುಖೇಶ್ ಸೋದರ ಅನಿಲ್ ಅಂಬಾನಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಫೇಲ್ ಅವ್ಯವಹಾರದ ಆರೋಪದಲ್ಲಿ ಭಾಗೀದಾರ ಎಂದು ನಿರಂತರವಾಗಿ ಆರೋಪಿಸಿತ್ತಿದ್ದಾರೆ. ಆದರೆ, ಇವೆಲ್ಲ ಬೆಳವಣಿಗೆಗಳ ನಡುವೆ ಮುಖೇಸ್ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿರುವುದುದ ಕುತೂಹಲ ಮೂಡಿಸಿದೆ. 

ಮುಂಬೈ ದಕ್ಷಿಣ ಕ್ಷೇತ್ರದಲ್ಲಿ ಏಪ್ರಿಲ್ 29ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 23ರಂದು ಪ್ರಕಟವಾಗಲಿದೆ. ಮಿಲಿಂದ್ ಭವಿಷ್ಯ ಏನಾಗಲಿದೆ ಎಂಬ ಕುತೂಹಲ ತಣಿಯಲು ಅಲ್ಲಿಯವರೆಗೆ ಕಾಯಲೇಬೇಕಿದೆ.


ಸಂಬಂಧಿತ ಟ್ಯಾಗ್ಗಳು

ambani richman congress wealthy


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ