ನಕಲಿ ಅಭಿನಂದನ್ ಫೋಟೋ ಬಳಸಿ ಬಿಜೆಪಿ ಪರ ಪ್ರಚಾರ

Fake Abhinandan

16-04-2019

ನಕಲಿ ವಿಂಗ್ ಕಮಾಂಡರ್ ಅಭಿನಂದನ್ ಹೆಸರಿನಲ್ಲಿ ಬಿಜೆಪಿ ಲಾಭ ಮಾಡಿಕೊಳ್ಳಲು ಯತ್ನಿಸಿದೆ. Namo Best PM of India ಹೆಸರಿನ ಫೇಸ್ ಬುಕ್ ಪೇಜ್ ನಲ್ಲಿ ಅಭಿನಂದನ್ ಹೋಲುವ ವ್ಯಕ್ತಿಯ ಫೋಟೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಬಿಜೆಪಿ ಬೆಂಬಲಿಸುವ ಈ ಪೇಜ್ ನಲ್ಲಿ ಸಾವಿರಾರು ಜನ ನಕಲಿ ಫೋಟೋವನ್ನು ಹಂಚಿಕೊಂಡಿದ್ದು, ಕಾಂಗ್ರೆಸ್ ವಿರುದ್ಧ ಹೇಳಿಕೆಯನ್ನು ಕೂಡ ಪೋಸ್ಟ್ ನಲ್ಲಿ ದಾಖಲಿಸಲಾಗಿದೆ. ಹಿಂದಿಯಲ್ಲಿರುವ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಅಭಿನಂದನ್ ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹರಡುವ ಮೂಲಕ ಬಿಜೆಪಿಗೆ ಲಾಭ ಮಾಡಿಕೊಡಲು ಯತ್ನಿಸಲಾಗಿದೆ. 

ಆದರೆ, ಈತ ನಕಲಿ ವ್ಯಕ್ತಿಯಾಗಿದ್ದು, ಅಭಿನಂದನ್ ಮತ್ತು ಫೋಟೋದಲ್ಲಿರುವ ವ್ಯಕ್ತಿಯ ಮುಖಚಹರೆಯಲ್ಲಿ ಕೆಲವು ಹೋಲಿಕೆಗಳು ಮಾತ್ರ ಇವೆ. ಸೂಕ್ಷ್ಮವಾಗಿ ಗಮನಿಸಿದರೆ, ಮುಖ, ಗದ್ದ, ಕುತ್ತಿಗೆಯಲ್ಲಿ ಭಿನ್ನತೆ ಇರುವ ಅಂಶಗಳು ಕಾಣುತ್ತವೆ. ಅಷ್ಟಕ್ಕೂ ಅಭಿನಂದನ್ ಅವರು ತಮಿಳುನಾಡಿನವರು. ಇನ್ನೊಂದು ಸಂಗತಿ ಎಂದರೆ, ತಮಿಳುನಾಡಿನಲ್ಲಿ ಇನ್ನೂ ಲೋಕಸಭೆ ಚುನಾವಣೆಯೇ ನಡೆದಿಲ್ಲ. ಇವೆಲ್ಲಕ್ಕಿಂತ ಗಮನಾರ್ಹ ಸಂಗತಿ ಎಂದರೆ, ಸರ್ಕಾರಿ ಅಧಿಕಾರಿಗಳು ಹೀಗೆ ಸರ್ಕಾರದ ಪರವಾಗಿ ಪ್ರಚಾರ ಮಾಡುವಂತೆ ಇಲ್ಲ. ಈ ಎಲ್ಲ ಸಂಗತಿಗಳನ್ನು ಗಮನಿಸಿದ ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಗಳು ಅಭಿನಂದನ್ ಜನಪ್ರಿಯತೆಯನ್ನು ಪಕ್ಷದ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ.

ಏಪ್ರಿಲ್ 13ರಂದು ಮಧ್ಯಾಹ್ನ 2:21ಕ್ಕೆ ಈ ಫೋಟೋ ಮತ್ತು ವಿಷಯವನ್ನು ಅಪ್ ಲೋಡ್ ಮಾಡಲಾಗಿದ್ದು, ಇದೇ ಪೋಸ್ಟ್ ಅನ್ನು 16/04/2019ರ ಸಂಜೆ 5 ಗಂಟೆಯ ಹೊತ್ತಿಗೆ 4,300 ಜನ ಶೇರ್ ಮಾಡಿದ್ದು, 1,100 ಕಾಮೆಂಟ್ ಗಳು ವ್ಯಕ್ತವಾಗಿವೆ. ಕಾಮೆಂಟ್ ಗಳಲ್ಲಿ ಬಹುತೇಕ ಬಿಜೆಪಿ ಅನುಯಾಯಿಗಳು ಮೋದಿ ಮತ್ತು ಅಭಿನಂದನ್ ಅವರನ್ನು ಹೊಗಳಿದ್ದಾರೆ. ಆದರೆ, ಕೆಲವರು ಅಭಿನಂದನ್ ಅವರ ಫೋಟೋವನ್ನು ಹಂಚಿಕೊಂಡು ಮೇಲಿನ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ. ಆದರೆ, ಮೋದಿ ಅನುಯಾಯಿಗಳು ವಿತಂಡವಾದ ನಡೆಸಿದ್ದಾರೆ.

ಆದರೆ, ಇದುವರೆಗೆ ವಿಪಕ್ಷಗಳು ಈ ಸಂಗತಿಯನ್ನು ಚುನಾವಣಾ ಆಯೋಗದ ಗಮನಕ್ಕೆ ತಂದಿಲ್ಲ. ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಡಲು, ಈ ನಕಲಿ ಪೋಸ್ಟ್ ಅನ್ನು ಡಿಲೀಟ್ ಮಾಡಿಸುವಲ್ಲಿ ಕೂಡ ವಿಫಲವಾಗಿವೆ.


ಸಂಬಂಧಿತ ಟ್ಯಾಗ್ಗಳು

#BJP Campaign #Abhinandan #Fake #Lok Sabha


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ