ವಯನಾಡಿನಲ್ಲಿ ರಾಹುಲ್ ಗೆಲುವು !

Rahul wins Wayanad !

14-04-2019

ಅಮೆಥಿಯೊಂದಿಗೆ ಕೇರಳದ ವಯನಾಡಿನಲ್ಲೂ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರು ಹೇಗೆ ಮತ್ತು ಯಾತಕ್ಕಾಗಿ ವಯನಾಡನ್ನು ಆರಿಸಿದರು ಎನ್ನುವುದು ಇನ್ನೂ ಸ್ಪಷ್ಟವಾಗದ ವಿಷಯ, ಆದರೆ ವಯನಾಡಿನಲ್ಲಿ ಸ್ಪರ್ಧಿಸುವುದರಿಂದ ರಾಹುಲ್ ಮತ್ತು ಕಾಂಗ್ರೆಸ್ ಗೆ ನಷ್ಟಕ್ಕಿಂತ ಲಾಭವೇ ಜಾಸ್ತಿ ಎನ್ನಲಾಗುತ್ತಿದೆ. ಹಿಂದೆಯೂ ಕೂಡ ಕಾಂಗ್ರೆಸ್ ಮುಂದಾಳತ್ವದ ರಂಗಕ್ಕೆ ವಯನಾಡಿನಲ್ಲಿ ಬೆಂಬಲ ಸಿಗುತ್ತಾ ಬಂದಿದೆ ಹಾಗೇ ಈ ಬಾರಿ ಕೂಡ ಅದೇ ರೀತಿಯಲ್ಲಿ ಜನ ವಯನಾಡಿನಲ್ಲಿ ರಾಹುಲ್ಗೆ ಮತ ಹಾಕುತ್ತಾರೆ ಎಂದು ಹೇಳಲಾಗುತ್ತಿದೆ. ಸ್ವಭಾವತಃ ಕೇರಳಿಗರು ಸೆಕ್ಯುಲರ್ ವಾದಿಗಳು  ಮತ್ತು ಬಿಜೆಪಿಯ ಕಟ್ಟರ್ ಹಿಂದುತ್ವ ಅಲ್ಲಿ ನಡೆಯುವುದಿಲ್ಲ. ಸಾಮಾನ್ಯವಾಗಿ ಕೇರಳಿಗರು ಯಾವುದೇ ಧರ್ಮದವರಾಗಿದ್ದರೂ ಅವರಿಗೆ ಬೇರೆ ಧರ್ಮದ ಸ್ನೇಹಿತರಿರುತ್ತಾರೆ, ಒಡನಾಡಿಗಳಿರುತ್ತಾರೆ ಮತ್ತು ವ್ಯಾಪಾರ ದಲ್ಲಿ ಪಾಲುದಾರರು ಮತ್ತು ಗ್ರಾಹಕರಿರುತ್ತಾರೆ. ಕೇರಳದಲ್ಲಿ ಸಣ್ಣ ಪುಟ್ಟ ಸಂಘರ್ಷಗಳು ಧರ್ಮದ ಹೆಸರಿನಲ್ಲಿ ನಡೆದಿದ್ದರೂ ಇಂದಿನವರೆಗೆ ಕೇರಳದ ಸಮಾಜದಲ್ಲಿ ಭಾವೈಕ್ಯತೆಯ ಕೊರತೆ ಇಲ್ಲ. ಈ ಬಾರಿ ಕೂಡ ಬಿಜೆಪಿಯ ಹಿಂದುತ್ವ ಮತ್ತು ಶಬರಿಮಲೆ ಹೋರಾಟ ವಯನಾಡಿನಲ್ಲಿ ಫಲ ಕೊಡುವ ಸಾಧ್ಯತೆ ಕಡಿಮೆ. ಹಾಗೇ ವಯನಾಡಿನಲ್ಲಿ ರಾಹುಲ್ ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೂಡ ಮುಸಲ್ಮಾನರ ವಿರುದ್ಧಮಾತನಾಡುವುದೇ ಆಗಲಿ ಅಥವ ಬಿಜೆಪಿಯ ಹಿಂದುತ್ವವನ್ನು ಬಿಂಬಿಸುವುದೇ ಆಗಲಿ ಮಾಡದಿರುವುದು ಇದಕ್ಕೆ ಸಾಕ್ಷಿ. 

ವಯನಾಡಿನ ಹಿಂದೂಗಳು, ಮುಸಲ್ಮಾನರು, ಪರಿಶಿಷ್ಟರು ಮತ್ತು ಜೈನರು ರಾಹುಲ್ ಗೆ ಓಟ್ ಹಾಕಲು ನಿರ್ಧರಿಸಿರುವಂತೆ ಕಾಣುತ್ತಿದೆ. ಅದಕ್ಕೆ ಇನ್ನೊಂದು ಕಾರಣ ಇಲ್ಲಿ ಪ್ರಬಲ ಬಿಜೆಪಿಯ ನಾಯಕತ್ವದ ಕೊರತೆ ಇರುವುದೂ ಒಂದಾಗಿದೆ. ಇತ್ತೀಚಿಗೆ ನಡೆದ ರಾಹುಲ್ ರ್ಯಾಲಿಯಲ್ಲಿ ವಯನಾಡ್ ನಲ್ಲಿ ಎಂದೂ ಕಾಣದಷ್ಟು ಜನ ಸೇರಿದ್ದು ಕೂಡ ಕಾಂಗ್ರೆಸ್ ವಿಶ್ವಾಸಕ್ಕೆ ಕಾರಣವಾಗಿದೆ. ಇದನ್ನೆಲ್ಲ ನೋಡಿ ಕಾಂಗ್ರೆಸ್ಸಿಗರು ವಯನಾಡಿನಲ್ಲಿ ರಾಹುಲ್ ಗೆಲುವು ಖಚಿತ ಎಂದು ಹೇಳುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಕಾಂಗ್ರೆಸ್ ರಾಹುಲ್ Wayanad Kerala


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ