ಒಬ್ಬ ಲೋಕಸಭಾ ಸದಸ್ಯ ಎಷ್ಟು ಜನರನ್ನು ಪ್ರತಿನಿಧಿಸುತ್ತಾರೆ?

How many people does a Member of Lok Sabha represent?

08-04-2019

ಭಾರತದಲ್ಲಿ ಇನ್ನು ಕೆಲವೇ ದಿನಗಳಲ್ಲಿ ವಿಶ್ವದ ಅತ್ಯಂತ ದೊಡ್ಡ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಜನರ ಪ್ರತಿನಿಧಿಗಳು ಲೋಕಸಭೆಗೆ ಆಯ್ಕೆಯಾಗಲಿದ್ದಾರೆ. ಈ ಚುನಾವಣೆ ಒಂದು ಅತ್ಯಂತ ದೊಡ್ಡ ಪ್ರಕ್ರಿಯೆಯಾಗಲಿದ್ದು ಜನರ ಆಶೋತ್ತರಗಳನ್ನು ಸಂಸತ್ತಿನಲ್ಲಿ ಬಿಂಬಿಸಬಲ್ಲ ಜನನಾಯಕರು ಆಯ್ಕೆಗೊಳ್ಳಲಿದ್ದಾರೆ. ಈ ಪ್ರಕ್ರಿಯೆಯಲ್ಲಿ ಕೋಟ್ಯಂತರ ಅರ್ಹ ಮತದಾರರು ಮತ ಹಾಕಲಿದ್ದು ಬಹುಮತದ ಮೂಲಕ ಲೋಕಸಭೆಗೆ ತಮ್ಮ ಪ್ರತಿನಿಧಿಯನ್ನು ಆರಿಸಲಿದ್ದಾರೆ. ಆದರೆ ಈ ಆಯ್ಕೆಯಾಗುವ ಲೋಕಸಭಾ ಸದಸ್ಯರು ಎಷ್ಟು ಜನರನ್ನು ಲೋಕಸಭೆಯಲ್ಲಿ  ಪ್ರತಿನಿಧಿಸುತ್ತಾರೆ ಎಂಬ ಕುತೂಹಲ ಸಹಜವಾಗೇ ಜನರಲ್ಲಿದೆ. ದೇಶದ ಮೊದಲನೇ ಲೋಕಸಭಾ ಚುನಾವಣೆಯಲ್ಲಿ ಸುಮಾರು 3 ಲಕ್ಷ ಜನರನ್ನು ಒಬ್ಬ ಸದಸ್ಯ ಪ್ರತಿನಿಧಿಸಿದ್ದರೆ ಈಗ ನಡೆಯುವ ಚುನಾವಣೆಯಲ್ಲಿ ಆಯ್ಕೆಯಾಗುವ ಪ್ರತಿಯೊಬ್ಬ ಲೋಕಸಭಾ ಸದಸ್ಯ ಸರಾಸರಿ ಸುಮಾರು 15 ಲಕ್ಷ ಮಂದಿಯನ್ನು ಪ್ರತಿನಿಧಿಸುತ್ತಾರೆ. ಇದು ವಿಶ್ವದ ಅನೇಕ ಸಣ್ಣ ದೇಶಗಳ ಜನಸಂಖ್ಯೆಗೆ ಸಮವಾಗಿದ್ದು ಇನ್ನು ಕೆಲವು ಪ್ರಭಾವಿ ದೇಶಗಳ ಸುಮಾರು ಶೇಖಡ ಹತ್ತರಷ್ಟು ಜನಸಂಖ್ಯೆಯಷ್ಟಾಗುತ್ತದೆ. ಆದರೆ ಆಯ್ಕೆಯಾದ ವ್ಯಕ್ತಿ ಅರ್ಹನೇ ಇಲ್ಲವೇ ಎಂಬುದೇ ಈ ಫಲಿತಾಂಶದ ಜಿಜ್ಞಾಸೆಯಾಗಿರುತ್ತದೆ. 

ಸುಮಾರು ೧೫ ಲಕ್ಷ ಜನರನ್ನು ಪ್ರತಿನಿಧಿಸುವ ವ್ಯಕ್ತಿಯ ಜವಾಬ್ಧಾರಿಗಳೇನು, ನಡವಳಿಕೆಯೇನು ಮತ್ತು ಸಂಸತ್ತಿನಲ್ಲಿ ಆತನ ವಿಚಾರಗಳೇನು ಎನ್ನುವುದನ್ನು ಮನದಲ್ಲಿಡಬೇಕಾಗಿರುತ್ತದೆ. ಆದರೆ ಪಕ್ಷ ರಾಜಕಾರಣದ ಹಿನ್ನೆಲೆಯಲ್ಲಿ ಈ 15 ಲಕ್ಷ ಜನರನ್ನು ಪ್ರತಿನಿಧಿಸುವ ವ್ಯಕ್ತಿ ಕೆಲವೊಮ್ಮೆ ಒಂದು ಪ್ರಶ್ನೆಯನ್ನೂ ಕೇಳದೆ ಒಂದು ವಿಚಾರವನ್ನೂ ಹೇಳದೆ ಅವಧಿ ಮುಗಿಸಿಕೊಂಡು ಪುನಃ ಮತ ಯಾಚನೆಗೆ ಬರುವುದು ಪ್ರಜಾಪ್ರಭುತ್ವದಲ್ಲಿ ದುರಂತವೇ ಸರಿ ಎಂದು ಹೇಳಬಹುದು.


ಸಂಬಂಧಿತ ಟ್ಯಾಗ್ಗಳು

#LokSabha #Election #India #2019


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ