ಡಿಕೆಶಿ ಕಾರು ಕೂಡಾ ತಪಾಸಣೆ

DK Shivakumar car inspected

05-04-2019

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬೆಂಗಾವಲು ವಾಹನಗಳನ್ನು ತಪಾಸಣೆ ಮಾಡಿದ ಹಿನ್ನೆಲೆಯಲ್ಲಿ, ಮಂಗಳೂರು ಪ್ರವಾಸದಲ್ಲಿದ್ದ ಡಿ ಕೆ ಶಿ ಅವರ ವಾಹನವನ್ನೂ ಬಂಟವಾಳದ ಹತ್ತಿರ ಕೆಲವು ದಿನಗಳ ಹಿಂದೆ ತಪಾಸಣೆ ಮಾಡಿರುವ ಸುದ್ದಿ ಈಗ ಹೊರ ಬಂದಿದೆ. ತಮ್ಮ ಪಕ್ಷದ ಅಭ್ಯರ್ಥಿ ಮಿಥುನ್  ರೈ ಅವರ ಪರವಾಗಿ ಪ್ರಚಾರ ನಡೆಸಲು ಬೆಳ್ತಂಗಡಿ ಕಡೆ ಪ್ರಯಾಣ ಬೆಳೆಸಿದ್ದ ಡಿ ಕೆ ಶಿ ಅವರ ವಾಹನವನ್ನು ಬಂಟವಾಳದ ಹತ್ತಿರ ಪೊಲೀಸರು ನಿಲ್ಲಿಸಿ  ತಪಾಸಣೆ ಮಾಡಿದ್ದೂ ಮಾತ್ರವಲ್ಲದೆ, ಅದರ ಬಗ್ಗೆ ತಪಾಸಣೆ ಮಾಡುತ್ತಿದ್ದ ಸಂಧರ್ಬದಲ್ಲೇ  ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಾ ಫೋಟೋ ಮತ್ತು ವಿಡಿಯೋ ತೆಗೆದುಕೊಳ್ಳುತ್ತಿದ್ದುದು ಜನರ ಗಮನಕ್ಕೆ ಬಂದಿದೆ.ಆಗ ಕಾರಿನಲ್ಲಿದ್ದ ಡಿ ಕೆ ಶಿ ಅವರು "ಸರಿಯಾಗಿ ತಪಾಸಣೆ ಮಾಡಿರಿ ಏನೆಲ್ಲಾ ಸಿಗುತ್ತದೆ ಅದೆಲ್ಲ ಸರಿಯಾಗಿ ತೆಗೆದುಕೊಂಡು ಪ್ರಕಟಿಸಿ", ಎಂದು ತಮಾಷೆಯಾಗಿ ಹೇಳಿದ್ದು ಮಾತ್ರವಲ್ಲದೇ, "ಕೊನೆಗೆ ಏನು ಸಿಕ್ಕಿತು"ಎಂದು ಹೇಳಿದ್ದು ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

#DK Shivakumar# #HDK# #Mithun Rai# Election#


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ