ಮೈತ್ರಿ ಅಭ್ಯರ್ಥಿಗಳ ಗೆಲುವು ಸಚಿವರ ಹೊಣೆ

 The victory of alliance candidates is the responsibility of the minister

01-04-2019

ಮೈತ್ರಿ ಸರ್ಕಾರದ ಬಲದೊಂದಿಗೆ ರಾಜ್ಯದಲ್ಲಿ ಬಿಜೆಪಿ ಓಟವನ್ನು ಕಟ್ಟಿಹಾಕುವ ಕನಸಿನಲ್ಲಿರುವ ಕಾಂಗ್ರೆಸ್ ಎಲೆಕ್ಷನ್‍ಗಾಗಿ ರಣತಂತ್ರ ರೂಪಿಸಿದೆ. ಮೈತ್ರಿ  ಅಭ್ಯರ್ಥಿಗಳನ್ನು  ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರುವ ಹೊಣೆಗಾರಿಕೆಯನ್ನು ಪಕ್ಷ ಸಚಿವರ ಹೆಗಲಿಗೆ ಹೇರಿದ್ದು, ಕ್ಷೇತ್ರಗಳನ್ನು ವಿಗಂಡನೆ ಮಾಡಿಕೊಡುವ ಮೂಲಕ ಸಚಿವರುಗಳ ಜವಾಬ್ದಾರಿ ಹೆಚ್ಚಿಸಿದೆ. 
'
ಕರ್ನಾಟಕ ಕಾಂಗ್ರೆಸ್‍ನ ಚುನಾವಣಾ ಉಸ್ತುವಾರಿ  ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಯಾ ಕ್ಷೇತ್ರದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಹೊಣೆಗಾರಿಕೆಯನ್ನು ಸಚಿವರುಗಳಿಗೆ ಹಂಚಲಾಯಿತು. ಅಲ್ಲದೇ ಯಾವುದೆ ನೆಪ ಹೇಳದಂತೆ ಗೆಲ್ಲಿಸಿಕೊಂಡು ಬರಬೇಕೆಂದು ಹೈಕಮಾಂಡ್ ಖಡಕ್ ಎಚ್ಚರಿಕೆ ನೀಡಿದೆ. 
ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಯನ್ನು ಸಚಿವರು ಮುಂದಾಳತ್ವ ವಹಿಸಿ ಗೆಲ್ಲಿಸಬೇಕು. ಎರಡು ಪಕ್ಷದ ಕಾರ್ಯಕರ್ತರು ಒಂದಾಗಿ ದುಡಿಯುವಂತೆ ನೋಡಿಕೊಳ್ಳಬೇಕು ಎಂದು ವೇಣುಗೋಪಾಲ್ ಆದೇಶಿಸಿದ್ದಾರೆ. 

ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಡಾ.ಜಯಮಾಲಾ, ದಕ್ಷಿಣ ಕನ್ನಡಕ್ಕೆ ಯು.ಟಿ.ಖಾದರ್, ಉತ್ತರ ಕನ್ನಡಕ್ಕೆ ಆರ್.ವಿ.ದೇಶಪಾಂಡೆ,  ಚಿತ್ರದುರ್ಗಕ್ಕೆ -ವೆಂಕಟರಮಣಪ್ಪ ಸೇರಿದಂತೆ ಎಲ್ಲ ಜಿಲ್ಲೆಗಳಿಗೂ ಆಯ್ದ ಸಚಿವರನ್ನು ನೇಮಿಸಲಾಗಿದೆ. ಮುಖ್ಯವಾಗಿ ತುಮಕೂರು ಕ್ಷೇತ್ರದಿಂದ ಕಣಕ್ಕಿಳಿದಿರುವ ಮಾಜಿ ಪ್ರಧಾನಿ ದೇವೆಗೌಡರನ್ನು ಗೆಲ್ಲಿಸುವ ಹೊಣೆಗಾರಿಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಹೆಗಲ ಮೇಲಿದ್ದರೇ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಹಾಗೂ ಹಾವೇರಿ ಕ್ಷೇತ್ರಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಉಸ್ತುವಾರಿಯಾಗಿದ್ದಾರೆ. 
ಆದರೆ ರಾಜ್ಯದ ಹೈವೋಲ್ವೇಜ್ ಕ್ಷೇತ್ರ ಹಾಗೂ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿರುವ ಮಂಡ್ಯ ಕ್ಷೇತ್ರಕ್ಕೆ ಯಾವುದೆ ಸಚಿವರನ್ನು ನೇಮಿಸಲಾಗಿಲ್ಲ. ಬಹುಷಃ ಸಿಎಂ ಕುಮಾರಸ್ವಾಮಿಯವರೇ ಖುದ್ದುಪ್ರಚಾರ ಮಾಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಮೈತ್ರಿ ಉಳಿಸಿಕೊಳ್ಳಲು ಹಾಗೂ ಬಿಜೆಪಿಹಿಂದಿಕ್ಕಲೂ ಕಾಂಗ್ರೆಸ್ ಶತಾಯ-ಗತಾಯ ಎಲ್ಲ ಕಸರತ್ತು ಆರಂಭಿಸಿದ್ದು, ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಕಾದು ನೋಡಬೇಕಿದೆ 
 


ಸಂಬಂಧಿತ ಟ್ಯಾಗ್ಗಳು

#Loksabha 2019 #K.C.Venugopal #Election #Ministers


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ