ಮಿಥುನ್ ರೈ ಪರ ಪ್ರಚಾರಕ್ಕೆ ಕರಾವಳಿಗೆ ಕಾಲಿಟ್ಟ ಡಿಕೆಶಿ

D.K.Shivkumar Walked to the coast for promotion of Mithun Rai

01-04-2019

ಮಂಗಳೂರಿನ ಜನತೆ ಬದಲಾವಣೆ ಬಯಸಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಈ ಬಾರಿ ಹೊಸ ಅಭ್ಯರ್ಥಿ, ಯುವ ನಾಯಕನಿಗೆ ಟಿಕೆಟ್ ನೀಡಿದೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ

ಪಕ್ಷದ ಪರವಾಗಿ ಪ್ರಚಾರಕ್ಕಾಗಿ ಏ.1 ರ ಸೋಮವಾರ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬಂದಿಳಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಈ ವಿಚಾರ ತಿಳಿಸಿದರು.

ಕರಾವಳಿಯ ಜನತೆ ಬದಲಾವಣೆ ಬಯಸಿದ್ದನ್ನು ನಾವು ಗುರುತಿಸಿದ್ದೇವೆ. ಹೀಗಾಗಿ ಸಮರ್ಥ ಅಭ್ಯರ್ಥಿ ಮಿಥುನ್ ರೈ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿದೆ. ನಾನು ಕೂಡಾ ಕರಾವಳಿಗೆ ಬಂದಿರುವುದು ನಮ್ಮ ಅಭ್ಯರ್ಥಿ ಮಿಥುನ್ ರೈ ಗೆ ಶಕ್ತಿ ತುಂಬಲೆಂದು ಹಾಗೂ ಅವರ ಪರ ಪ್ರಚಾರ ನಡೆಸಲು ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಮಂಗಳವಾರದಂದು ಬೆಂಗಳೂರು ಗ್ರಾಮಾಂತರಕ್ಕೆ ಅಮಿತ್ ಶಾ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಯಾರೂ ಎಲ್ಲಿಗೆ ಬಂದರೂ ಕೂಡಾ ಭಯವಿಲ್ಲ, ಯಾಕೆಂದರೆ ನಾವು ನಮ್ಮ ಕೆಲಸ ಮಾಡುತ್ತೇವೆ, ಬಿ.ಜೆ.ಪಿಯವರು ಅವರ ಕೆಲಸ ಮಾಡುತ್ತಾರೆ. ಆದರೆ ಗೆಲ್ಲುವ ಭರವಸೆ ನಮಗಿದೆ ಎಂದರು. 

ಇನ್ನು ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಚಿವ ಡಿಕೆಶಿ ಅವರನ್ನು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಅಭ್ಯರ್ಥಿ ಮಿಥುನ್ ರೈ ,ಮಾಜಿ ಶಾಸಕ ಜೆ.ಆರ್ ಲೋಬೋ ಮತ್ತಿತ್ತರ ನಾಯಕರು ಸ್ವಾಗತಿಸಿದರು.


ಸಂಬಂಧಿತ ಟ್ಯಾಗ್ಗಳು

#Loksabha 2019 #Mithun Rai #D.K.Shivkumar #Mangalore


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ