ರಾಹುಲ್‍ಗೆ ಸವಾಲೆಸೆದ ಬಿಎಸ್‍ವೈ- ಕಂಗಾಲಾದ ಕಾಂಗ್ರೆಸ್  

 BSY challenges Rahul

01-04-2019

ನಿನ್ನೆ ಮೈತ್ರಿಪಕ್ಷದ ಬಹುದೊಡ್ಡ ಚುನಾವಣಾ ಪ್ರಚಾರ ಸಭೆ ನಡೆಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಇವತ್ತು ದೊಡ್ಡದೊಂದು ಮುಜುಗರ ಎದುರಾಗಿದೆ. ನಿನ್ನೆ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ  ನಡೆಸುವ ಭರದಲ್ಲಿ ಮಾಡಿದ ಆಪಾದನೆಗೆ ಪ್ರತಿಯಾಗಿ ಬಿಎಸ್‍ವೈ ರಾಹುಲ್‍ಗೆ ಭರ್ಜರಿ ಸವಾಲೆಸೆದಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಇದರಿಂದ ಮುಜುಗರಕ್ಕೊಳಗಾಗುವಂತಾಗಿದೆ. 


ನಿನ್ನೆ ನೆಲಮಂಗಲದಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಮೈತ್ರಿಪಕ್ಷದ ಬಲಪ್ರದರ್ಶನದ ವೇಳೆ ಬಿಜೆಪಿ ಹಾಗೂ ಬಿಎಸ್‍ವೈ ವಿರುದ್ಧ ಕಾಂಗ್ರೆಸ್‍ನ ಭಾವಿ ಪ್ರಧಾನಿ ಎಂದೇ ಬಿಂಬಿತವಾಗುವ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. ಈ ವೇಳೆ ಸೂಕ್ತ ಮಾಹಿತಿ ಇಲ್ಲದಂತೆ ಮಾತನಾಡಿದ ರಾಹುಲ್ ಗಾಂಧಿ, ಐಟಿ ಇಲಾಖೆ ಕ್ಲೀನ್ ಚಿಟ್ ನೀಡಿರುವ ಕಪ್ಪ ಡೈರಿ ವಿಚಾರವನ್ನು ಪ್ರಸ್ತಾಪಿಸಿದರು. ಬಿಎಸ್‍ವೈ ಹಿರಿಯ ನಾಯಕರಿಗೆ ಕಪ್ಪ ನೀಡಿದ್ದಾರೆ ಎಂದು ಆರೋಪಿಸಿದರು. 
ರಾಹುಲ್ ಗಾಂಧಿ ಈ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೆಂಡಾಮಂಡಲವಾಗಿದ್ದು, ಇಂದು ರಾಹುಲ್ ಹೇಳಿಕೆಗೆ ಪತ್ರಿಕಾ ಪ್ರಕಟಣೆಯ ಮೂಲಕ ಉತ್ತರ ನೀಡಿದ್ದು, ತಮ್ಮ ಆರೋಪವನ್ನು ರಾಹುಲ್ ಗಾಂಧಿ ಸಾಬೀತುಪಡಿಸಬೇಕೆಂದು ಸವಾಲೆಸೆದಿದ್ದಾರೆ. 


ರಾಹುಲ್ ಗಾಂಧಿ ನಾನು ಓಪನ್ ಚಾಲೆಂಜ್ ಹಾಕುತ್ತೇನೆ ಎಂದಿರುವ ಬಿಎಸ್‍ವೈ, ರಾಹುಲ್ ಗಾಂಧಿ, ತಮ್ಮ ಹೇಳಿಕೆಗೆ ಬದ್ಧರಾಗಿ ನಮ್ಮ ಮತ್ತು ನಮ್ಮ ನಾಯಕರುಗಳ ಮೇಲೆ ಮಾಡಿರುವ ಅಪಾದನೆಯನ್ನು, ಆರೋಪವನ್ನು ಸಾಬೀತುಪಡಿಸಬೇಕು. ಇಲ್ಲದಿದ್ದರೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂಬ ಸವಾಲು ಹಾಕಿದ್ದಾರೆ. 
ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿ ಘನತೆಯಿಂದ ಈಸವಾಲು ಸ್ವೀಕರಿಸಬೇಕು. ಒಂದೊಮ್ಮೆ ರಾಹುಲ್ ಗಾಂಧಿ ಈ ಆರೋಪವನ್ನು ಸಾಬೀತುಪಡಿಸಿದಲ್ಲಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಬಿಎಸ್‍ವೈ ಘೋಷಿಸಿದ್ದಾರೆ. 


ಅಲ್ಲದೆ ಐಟಿ ಇಲಾಖೆ ಅಧಿಕಾರಿಗಳು ಡೈರಿ ನಕಲಿ ಎಂದ ಮೇಲೂ ರಾಹುಲ್ ಇದನ್ನು ಬಳಸಿಕೊಂಡು ವಾಗ್ದಾಳಿ ನಡೆಸುತ್ತಿರುವುದು, ಅವರಿಗೆ ದೇಶದ ಸಂವಿಧಾನ ಹಾಗೂ ಕಾನೂನಾತ್ಮಕವಾಗಿ ಸ್ಥಾಪಿಸಲಾದ ವ್ಯವಸ್ಥೆಗಳ ಮೇಲೆ ನಂಬಿಕೆ ಇಲ್ಲ ಎಂಬುದನ್ನು ನಿರೂಪಿಸುತ್ತದೆ ಎಂದು ಯಡಿಯೂರಪ್ಪ ಕಿಡಿಕಾರಿದ್ದಾರೆ. 


ರಾಹುಲ್ ಗಾಂಧಿ ಭಾಷಣ ಮಾಡುವ ವೇಳೆ ಉದ್ದೇಶಪೂರ್ವಕವಾಗಿ ಈ ಮಾಹಿತಿ ನೀಡಿ ಭಾಷಣದಲ್ಲಿ ಉಲ್ಲೇಖಿಸುವಂತೆ ಮಾಡಿದ ಕಾಂಗ್ರೆಸ್-ಜೆಡಿಎಸ್ ನಾಯಕರು ಈಗ ಮುಜುಗರ ಎದುರಿಸುವಂತಾಗಿದ್ದು, ರಾಹುಲ್ ಗಾಂಧಿ ಬಿಎಸ್‍ವೈ ನೀಡಿದ ಈ ಎದುರೇಟಿಗೆ ಏನಂತ ಉತ್ತರಿಸುತ್ತಾರೆ ಕಾದು ನೋಡಬೇಕಿದೆ. 


ಸಂಬಂಧಿತ ಟ್ಯಾಗ್ಗಳು

#Loksabha 2019 #Bsy #Rahul Gandhi #Challenge


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ