ಸಿಂಗಲ್ ಫಾರ್ ಎವರ್ ಎಂದ ರಶ್ಮಿಕಾ ಮಂದಣ್ಣ

 Rashmika Mandanna told Single For Ever

01-04-2019

ಇತ್ತೀಚಿಗಷ್ಟೆ ಸಿಂಗಲ್ ಫಾರ್ ಎವರ್ ಎಂದು ಟ್ವಿಟ್ ಮಾಡಿ ಅಚ್ಚರಿ ಮೂಡಿಸಿದ್ದ ರಶ್ಮಿಕಾ ಮಂದಣ್ಣ, ಈಗ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಹೌದು ಸಿಂಗಲ್ ಫಾರ್ ಎವರ್ ಎಂದು ರಶ್ಮಿಕಾ ತಮ್ಮ ಬ್ರೇಕ್ ಅಪ್ ನೋವು ಹಂಚಿಕೊಳ್ಳುತ್ತಿದ್ದಾರೆ ಎಂದು ನೀವಂದುಕೊಂಡಿದ್ರೆ ಅದು ನಿಜವಲ್ಲ. ಬದಲಾಗಿ ಸಿಂಗಲ್ ಫಾರ್ ಎವರ್ ಅನ್ನೋದು ಅವರ ನೆಕ್ಸ್ಟ್ ಚಿತ್ರದ ಟೈಟಲ್‍ನ ಟ್ಯಾಗಲೈನ್. 
ಹೌದು ಈಗಾಗಲೆ ತೆಲುಗಿನಲ್ಲಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ರಶ್ಮಿಕಾ, ಕೆಲ ದಿನಗಳ ಹಿಂದೆಯಷ್ಟೇ, ಶಿವಕಾರ್ತಿಕೇಯನ್  ನಟನೆಯ ಚಿತ್ರ ಸಹಿ ಮಾಡಿದ್ದರು. ಈಗ ಮತ್ತೊಂದು ಚಿತ್ರದಲ್ಲಿ ನಟಿಸಲಿದ್ದು, ಆ ಚಿತ್ರದ ಟೈಟಲ್  ಭೀಷ್ಮಾ, ಸಿಂಗಲ್ ಫಾರ್ ಎವರ್ . 
ಚಿತ್ರದ ಪೋಸ್ಟರ್ ಈಗಾಗಲೆ ರಿಲೀಸ್ ಆಗಿದ್ದು, ವೆಂಕಿ ಕುಡುಮುಲ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ಬಗ್ಗೆ ರಶ್ಮಿಕಾ ತುಂಬಾ ನೀರಿಕ್ಷೆ ಇಟ್ಟುಕೊಂಡಿದ್ದು, ಶೂಟಿಂಗ್ ಯಾವಾಗ ಆರಂಭವಾಗುತ್ತೋ ಎಂಬುದರ ಬಗ್ಗೆ ನಾನು  ಅತಿಯಾದ ಎಕ್ಸೈಟ್ ಆಗಿದ್ದೇನೆ.  ಚಿತ್ರೀಕರಣ ಶುರುವಾಗುವರೆಗೂ ಕಾಯಲಾಗುತ್ತಿಲ್ಲ. ಪ್ಲೀಸ್ ಬೇಗ ಆರಂಭಿಸಿ ಎಂದು ಟ್ವಿಟ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ. 
ವೆಂಕಿ ನಿರ್ದೇಶನದ  ಛಲೋ ಚಿತ್ರದ ಮೂಲಕವೇ  ರಶ್ಮಿಕಾ ಟಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ಸಧ್ಯ ಕನ್ನಡದಲ್ಲಿ ಅವಕಾಶಗಳಿಲ್ಲದ ಕಾರಣ ರಶ್ಮಿಕಾ, ತಮಿಳು, ತೆಲುಗು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ರಶ್ಮಿಕಾ ಪೊಗರು ಚಿತ್ರದ ಶೂಟಿಂಗ್ ಮುಗಿಸಿದ್ದು, ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ 


ಸಂಬಂಧಿತ ಟ್ಯಾಗ್ಗಳು

#Sandalwood #Bishma #Rashmika Mandanna #Singal For Ever


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ