ಪ್ಯಾನ್‍ಗೆ ಆಧಾರ ಲಿಂಕ್, ಅವಧಿ ವಿಸ್ತರಣೆ

Adhar Link to Pan Anchor time  extension

01-04-2019

ದೇಶದಲ್ಲಿ ಪ್ಯಾನ್ ಮತ್ತು  ಆಧಾರ್ ಕಾರ್ಡ್ ಲಿಂಕ್ ಮಾಡಲು ನೀಡಿದ್ದ ಗಡುವನ್ನು ಕೇಂದ್ರ ಸರ್ಕಾರ ಮತ್ತೆ ವಿಸ್ತರಿಸಿದೆ.  ಈ ಮೊದಲು ಮಾರ್ಚ್ 31ಕ್ಕೆ ಗಡುವನ್ನು ನಿಗದಿ ಪಡಿಸಲಾಗಿತ್ತು. ಆದರೆ ಈಗ ಈ ಗಡುವನ್ನು  ಸರ್ಕಾರ ಸೆ.30ಕ್ಕೆ ಮುಂದೂಡಿದೆ. 
ಏಪ್ರಿಲ್ 1 ರಿಂದ  ಅನ್ವಯವಾಗುವಂತೆ  ಆದಾಯ ತೆರಿಗೆ  ರಿಟನ್ಸ್ ಫೈಲ್ ಮಾಡಲು  ಆಧಾರ ಕಡ್ಡಾಯವಾಗಿದೆ. ಹೀಗಾಗಿ  ಆಧಾರ ಪ್ಯಾನ್ ಕಾರ್ಡ್ ಲಿಂಕ್ ಅನಿವಾರ್ಯ ಎಂದು ಕೇಂದ್ರ ಸರ್ಕಾರ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಆಧಾರ್-ಪ್ಯಾನ್ ಲಿಂಕ್ ಕಾರ್ಯಗಳು ಆರಂಭಗೊಂಡಿದ್ದವು. 
ಈ ಮೊದಲು ಪ್ಯಾನ್ ಮತ್ತು ಆಧಾರ್  ಲಿಂಕ್ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ,  ಗಡುವು ನೀಡಿತ್ತು. ಆದರೆ ಈ ಕಾರ್ಯದಲ್ಲಿ ಹಲವು ತಾಂತ್ರಿಕ ತೊಡಕುಗಳು ಸೃಷ್ಟಿಯಾದ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ಗಡುವನ್ನು ವಿಸ್ತರಿಸಿದೆ. ಈಗಾಗಲೆ ಬಹುತೇಕರು ಲಿಂಕ್ ಮಾಡಿಕೊಂಡಿದ್ದು, ಲಿಂಕ್ ಮಾಡಿಸಿಕೊಳ್ಳದವರಿಗೆ ಮತ್ತೊಂದು ಅವಕಾಶ ಲಭ್ಯವಾಗಿಲಿದೆ. 


ಸಂಬಂಧಿತ ಟ್ಯಾಗ್ಗಳು

#India #pan #Adhar Card #Government


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ