ಕೇರಳದಿಂದ ಕಣಕ್ಕಿಳಿಯಲಿದ್ದಾರೆ ರಾಹುಲ್ ಗಾಂಧಿ 

Rahul Gandhi will contest from Kerala

01-04-2019

ಕಾಂಗ್ರೆಸ್‍ನ ಯುವರಾಜ ರಾಹುಲ್ ಗಾಂಧಿ, ಈ ಬಾರಿಯ ಲೋಕಸಭಾ ಎಲೆಕ್ಷನ್‍ನಲ್ಲಿ ಬರೋಬ್ಬರಿ ಎರಡೆರಡು ಲೋಕಸಭಾ ಕ್ಷೇತ್ರಗಳಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.  ಉತ್ತರ ಪ್ರದೇಶದ ಅಮೇಥಿಯಿಂದ ಕಣಕ್ಕಿಳಿಯಲಿರುವ ರಾಹುಲ್ ಗಾಂಧಿ  ದಕ್ಷಿಣ ಭಾರತದಿಂದಲೂ ಚುನಾವಣೆ ಎದುರಿಸಲಿದ್ದಾರೆ. ಹೌದು ಕೇರಳದ ವಯನಾಡ್‍ನಿಂದಲೂ ರಾಹುಲ್ ಅದೃಷ್ಟ ಪಣಕ್ಕಿಡಲಾಗಿದೆ. 

ಕೇರಳದ ವಯನಾಡ್‍ನಿಂದ ರಾಹುಲ್ ಗಾಂಧಿ ಕಣಕ್ಕಿಳಿಯುವ ವಿಚಾರವನ್ನು ಕಾಂಗ್ರೆಸ್ ನಾಯಕ ಎ.ಕೆ.ಆ್ಯಂಟನಿ ಪ್ರಕಟಿಸಿದ್ದು, ಈಗಾಗಲೆ ವಯನಾಡ್ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿದ್ದ  ಸಿದ್ದಿಕಿ ಕಣದಿಂದ ಹಿಂದೆ ಸರಿದಿದ್ದಾರೆ. ಶೇಕಡಾ 49 ಅಧಿಕ ಪ್ರಮಾಣದಲ್ಲಿ ಮುಸ್ಲಿಂರನ್ನು ಹೊಂದಿರುವ ಈ ಪ್ರದೇಶದಲ್ಲಿ ಸುಲಭವಾಗಿ ಗೆಲ್ಲುವ ಭರವಸೆಯೊಂದಿಗೆ ರಾಹುಲ್ ಕಣಕ್ಕಿಳಿಯುತ್ತಿದ್ದಾರೆ ಎನ್ನಲಾಗಿದೆ. 

ಇದಕ್ಕೂ ಮುನ್ನ ರಾಹುಲ್ ಗಾಂಧಿಯನ್ನು ಕರ್ನಾಟಕದಿಂದಲೂ ಸ್ಪರ್ಧಿಸಲು ಆಹ್ವಾನಿಸಲಾಗಿತ್ತು. ಅಲ್ಲದೆ ತಮಿಳುನಾಡಿನಿಂದಲೂ ಸ್ಪರ್ಧಿಸಲು ಆಹ್ವಾನಿಸಲಾಗಿತ್ತು. ಕೊನೆಗೆ ರಾಹುಲ್ ಗಾಂಧಿ ಕೇರಳದ ವಯನಾಡ್‍ನ್ನು ಆಯ್ಕೆ ಮಾಡಿಕೊಂಡಿದ್ದಾರೆ. 
 ಉತ್ತರ ಪ್ರದೇಶದ ಅಮೇಥಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಹೀಗಾಗಿ ಅಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ. ಇದನ್ನು ತಪ್ಪಿಸಿಕೊಳ್ಳಲು ರಾಹುಲ್ ಗಾಂಧಿ ಎರಡು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಟೀಕಿಸಿದೆ. 
ಆದರೆ ಇದಕ್ಕೆ ಕಾಂಗ್ರೆಸ್ ಕೂಡ ತಿರುಗೇಟು ನೀಡಿದ್ದು, ಅಷ್ಟೆಲ್ಲ ಕಾನ್ಸಿಡೆನ್ಸ್ ಇರುವ ಮೋದಿ ತಮ್ಮ ತವರು ಗುಜರಾತ್‍ನ್ನ ಬಿಟ್ಟು ಉತ್ತರ ಪ್ರದೇಶದ ವಾರಣಾಸಿಯಿಂದ ಸ್ಪರ್ಧಿಸುತ್ತಿರೋದ್ಯಾಕೆ ಎಂದು ಪ್ರಶ್ನಿಸಿದೆ. ಒಟ್ಟಿನಲ್ಲಿ ರಾಹುಲ್ ಗಾಂಧಿ ಎರಡೆರಡು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. 


ಸಂಬಂಧಿತ ಟ್ಯಾಗ್ಗಳು

#Loksabha 2019 #Rahul Gandhi #Kerala #Contest


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ