ನೀರವ್ ಮೋದಿಗೆ ನೋ ಬೇಲ್ 

 No bail to Neerav Modi

30-03-2019

ಬ್ಯಾಂಕ್‍ಗಳಿಗೆ  ವಂಚಿಸಿ ಪರಾರಿಯಾಗಿ ಲಂಡನ್‍ನಲ್ಲಿ ಬಂಧನಕ್ಕೊಳಗಾಗಿರುವ ನೀರವ್ ಮೋದಿ ಗೆ ಲಂಡನ್ ನ್ಯಾಯಾಲಯ ಮತ್ತೆ ಜಾಮೀನು ನಿರಾಕರಿಸಿದೆ. ಲಂಡನ್‍ನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನೀರವ್ ಮೋದಿ ಎರಡನೇ ಬಾರಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. 

ನೀರವ್ ಮೋದಿ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯದಲ್ಲಿ  ನೀರವ್ ಮೋದಿ, ಸಾಕ್ಷ್ಯದಾರರೊಬ್ಬರಿಗೆ  ಬೆದರಿಕೆ ಒಡ್ಡಿದ್ದಾರೆ. ಮತ್ತು ತಮ್ಮನ್ನು ಬಂಧಿಸಲು ಬಂದವರಿಗೆ ಲಂಚದ ಆಮಿಷ ಒಡ್ಡಿದ್ದಾರೆ ಎಂದು ವಕೀಲರು ವಾದ ಮಂಡಿಸಿದರು. ಅಲ್ಲದೆ ನೀರವ್ ಮೋದಿ, ವನುತುವ ಎಂದ ದ್ವೀಪದ ಪೌರತ್ವ ಪಡೆದು ಲಂಡನ್‍ನಿಂದ ಪಾರಾಗಲು ಯತ್ನಿಸುತ್ತಿದ್ದಾರೆ ಎಂಬುದಕ್ಕೆ ಪೂರಕವಾದ ದಾಖಲೆಗಳನ್ನು ನ್ಯಾಯವಾದಿಗಳು ನ್ಯಾಯಾಲಯಕ್ಕೆ ಸಲ್ಲಿಸಿದರು.
 
ಇದನ್ನೆಲ್ಲ ಗಮನಿಸಿ ನ್ಯಾಯಾಧೀಶರು ನೀರವ್‍ಗೆ ಜಾಮೀನು ನಿರಾಕರಿಸಿದರು.  ಕೋರ್ಟ್ ವಿಚಾರಣೆ ಬಳಿಕ ನೀರವ್ ಮೋದಿಯನ್ನು  ಮತ್ತೆ ಎಚ್‍ಎಂಪಿ ವ್ಯಾಂಡ್ಸ್ ವರ್ತ ಜೈಲಿಗೆ ಕಳುಹಿಸಲಾಗಿದ್ದು,  ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 23 ಕ್ಕೆ ಮುಂದೂಡಲಾಗಿದೆ. ಅಂದು ವಿಡಿಯೋ ಕಾನ್ಸರೆನ್ಸ್ ಮೂಲಕ ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ. 
ಇನ್ನು ಲಂಡನ್ ನ್ಯಾಯಾಲಯದ ಈ ನಿರ್ಧಾರಕ್ಕೆ ಭಾರತದಾದ್ಯಂತ ಸ್ವಾಗತ ವ್ಯಕ್ತವಾಗಿದ್ದು, ನೀರವ್ ಮೋದಿ ಮತ್ತೆ ಜೈಲಿಗೆ ತೆರಳಿರುವ ನ್ಯಾಯಾಲಯದ ಆದೇಶಕ್ಕೆ ಜನ ಸಂತೋಷ ವ್ಯಕ್ತಪಡಿಸಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Londan #No Bail #Court #Neerav Modi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ