ಕೆಜಿಎಫ್ ಸಿನಿಮಾ ಪ್ರದರ್ಶನ ವೇಳೆ ಕರೆಂಟ್ ಕಟ್ ಮಾಡಿದ್ರೇ ಮೆಸ್ಕಾಂಗೆ ಬೆಂಕಿ ಬೆದರಿಕೆ

 The threat of fire to the current cut-made mescam during the KGF cinema show

29-03-2019

ಇದೇ ಶನಿವಾರ ಕನ್ನಡ ಖಾಸಗಿ ವಾಹಿನಿಯೊಂದರಲ್ಲಿ ಯಶ್ ಅಭಿನಯದ ಕೆಜಿಎಫ್ ಚಲನಚಿತ್ರ ಪ್ರಸಾರವಾಗುತ್ತದೆ. ಹೀಗಾಗಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಾಳೆ ಕರೆಂಟ್ ಕಟ್ ಮಾಡಿದ್ರೇ ಮೆಸ್ಕಾಂ ಕಚೇರಿಗೆ ಬೆಂಕಿ ಹಚ್ಚುವುದಾಗಿ ಅದೇ ಕಚೇರಿಗೆ ಕಿಡಿಗೇಡಿಗಳು ಪತ್ರ ಬರೆದಿದ್ದಾರೆ.

ಕೆಜಿಎಫ್ ಚಲನಚಿತ್ರ ಪ್ರಸಾರ ಮಾಡುವಾಗ ಸಿಎಂ ಕುಮಾರಸ್ವಾಮಿ ಹೇಳಿದರು, ಅಪ್ಪಾಜಿ ಹೇಳಿದರು ಅಂತಾ ಕರೆಂಟ್ ತೆಗೆದ್ರೇ ಚೆನ್ನಾಗಿರಲ್ಲ. ಒಂದು ವೇಳೆ ಕರೆಂಟ್ ತೆಗೆದ್ರೇ ನಿಮ್ಮ ಕಚೇರಿಗೇ ಬೆಂಕಿ ಹಚ್ಚಲಾಗುವುದು.ಜೊತೆಗೆ ಬಾಂಬ್ ಫಿಕ್ಸ್ ಮಾಡುವುದಾಗಿ ಯಶ್ ಅಭಿಮಾನಿಗಳ ಹೆಸರಿನಲ್ಲಿ ಬೆದರಿಕೆಯ ಪತ್ರ ಒಂದನ್ನ ಬರೆಯಲಾಗಿದೆ.

ಭದ್ರಾವತಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಹೆಸರು ಬರೆದು ಎಇಇ ಕಚೇರಿ ವಿಳಾಸ ಬರೆದಿರುವುದರಿಂದ, ಎಇಇ ಸುರೇಶ್‍ರವರು ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪತ್ರದ ಕೊನೆಯಲ್ಲಿ ಯಶ್ ಅಭಿಮಾನಿಗಳು, ಬಿಜೆಪಿ ಅಭಿಮಾನಿಗಳು ಎಂದು ಬರೆದಿರುವುದು ನೋಡಿದರೆ, ಇದು ಕಿಡಿಗೇಡಿಗಳ ಕೃತ್ಯ ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ ಎಂದು ಹೇಳಲಾಗುತ್ತಿದೆ.
 


ಸಂಬಂಧಿತ ಟ್ಯಾಗ್ಗಳು

#Karnataka #Power Cut #KGF #Kumaraswamy


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ