ಕೊನೆಗೂ ಪಕ್ಷಕ್ಕೆ ಮಣಿದ ಮುದ್ದಹನುಮೇಗೌಡ-ಗೌಡ್ರ ಗೆಲುವಿನ ಹಾದಿ ಸುಗಮ

 Finally, Muddahanume gwoda lost to  party-

29-03-2019

ಇಬ್ಬರು ಮೊಮ್ಮಕ್ಕಳಿಗೆ ಜೆಡಿಎಸ್‍ನ ಭದ್ರಕೋಟೆಯನ್ನು ಬಿಟ್ಟುಕೊಟ್ಟು ಅತಂತ್ರ ಸ್ಥಿತಿ ತಲುಪಿದ್ದ ಮಾಜಿ ಪ್ರಧಾನಿ ದೇವೆಗೌಡರ್ ಗೆಲುವಿನ ಹಾದಿ ಕೊನೆಗೂ ಸುಗಮವಾಗಿದೆ.  ಕಲ್ಪತರ ನಾಡು ತುಮಕೂರಿನಿಂದ ಕಣಕ್ಕಿಳಿದು ಲೋಕಭೆ ಪ್ರವೇಶಿಸುವ ಅವರ ಕನಸ್ಸಿಗೆ ಅಡ್ಡಿಯಾಗಿದ್ದ ಕಾಂಗ್ರೆಸ್‍ನ ಬಂಡಾಯ ಅಭ್ಯರ್ಥಿ ಮುದ್ದಹನುಮೇಗೌಡ ಕೊನೆಗೂ ನಾಮಪತ್ರ ಹಿಂಪಡೆದಿದ್ದು, ಕಾಂಗ್ರೆಸ್ ಬಂಡಾಯ ಶಮನ ಮಾಡುವುದರಲ್ಲಿ ಯಶಸ್ವಿಯಾಗಿದೆ. 
ಹಾಲಿ ಕಾಂಗ್ರೆಸ್ ಸಂಸದರಾಗಿದ್ದ ಮುದ್ದಹನುಮೇಗೌಡರು ಮೈತ್ರಿ ಸರ್ಕಾರದಿಂದ ತುಮಕೂರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿದ್ದಕ್ಕೆ ಮುನಿಸಿಕೊಂಡಿದ್ದರು. ಪಕ್ಷದ ಈ ನಿರ್ಧಾರವನ್ನು ವಿರೋಧಿಸಿದ್ದ ಮುದ್ದಹನುಮೇ ಗೌಡ ಸ್ವತಂತ್ರವಾಗಿ ಸ್ಪರ್ಧಿಸಲು ಮುಂದಾಗಿದ್ದರು. ಅಷ್ಟೇ ಅಲ್ಲ ಕೊನೆಯವರೆಗೂ ಕಾಂಗ್ರೆಸ್ ನಾಯಕರಿಗೆ ಕಾಲಾವಕಾಶ ನೀಡಿದ್ದ ಗೌಡರು ಎರಡು ಸೆಟ್ ನಾಮಪತ್ರ ಕೂಡ ಸಲ್ಲಿಸಿದ್ದರು. 
ಈ ಮಧ್ಯೆ ಇಬ್ಬರೂ ಮೊಮ್ಮಕ್ಕಳಿಗೆ ಒಂದೊಂದು ಜೆಡಿಎಸ್ ಗಟ್ಟಿನೆಲವನ್ನು ಬಿಟ್ಟುಕೊಟ್ಟಿದ್ದ ದೇವೆಗೌಡರು ತುಮಕೂರಿನಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದರು. ಮೈತ್ರಿ ಧರ್ಮದಂತೆ ಹಾಗೂ ರಾಹುಲ್ ಗಾಂಧಿ ಸೂಚನೆಯಂತೆ ದೇವೆಗೌಡರನ್ನು ಗೆಲ್ಲಿಸುವ ಹೊಣೆ ಹೊತ್ತಿದ್ದ ಕಾಂಗ್ರೆಸ್ ನಾಯಕರಿಗೆ ಮುದ್ದಹನುಮೇಗೌಡರ ಬಂಡಾಯ ನುಂಗಲಾರದ ತುತ್ತಾಗಿತ್ತು. 
ಒಂದೊಮ್ಮೆ ದೇವೆಗೌಡರ್ ವಿರುದ್ಧ ಮುದ್ದಹನುಮೇ ಗೌಡರು ಸ್ಪರ್ಧಿಸಿದರೇ ದೇವೆಗೌಡರ್ ಸೋಲು ಪಕ್ಕಾ ಎನ್ನಲಾಗುತ್ತಿತ್ತು. ಹೀಗಾಗಿ ಶತಾಯ ಗತಾಯ ದೇವೆಗೌಡರನ್ನು ಗೆಲ್ಲಿಸುವ ಅನಿವಾರ್ಯತೆ ಇದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಸತತ ಒಂದು ವಾರದಿಂದ ಸಂಸದ ಮುದ್ದಹನುಮೇ ಗೌಡರನ್ನು ಮನವೊಲಿಸಿ  ನಾಮಪತ್ರ ಹಿಂಪಡೆದುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 
ಇಂದು ಮೊದಲ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುವುದರಿಂದ ಕಾಂಗ್ರೆಸ್ ಮನವೊಲಿಕೆಗೆ ಸ್ಪಂದಿಸಿದ ಮುದ್ದಹನುಮೇಗೌಡರು  ನಾಮಪತ್ರ ಹಿಂಪಡೆದಿದ್ದಾರೆ. ರಾಹುಲ್ ಗಾಂಧಿ ಪೋನ್ ಕರೆ ಮಾಡಿ, ಮುದ್ದಹನುಮೇಗೌಡರ್‍ನ್ನು  ಮನವೊಲಿಸಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುದ್ದಹನುಮೇಗೌಡರು  ಪಕ್ಷ ಹಾಗೂ ಹೈಕಮಾಂಡ್ ಮಾತಿಗೆ ಬೆಲೆ ನೀಡಿ ನಾಮಪತ್ರ ಹಿಂಪಡೆದಿದ್ದಾರೆ. ಇದರಿಂದ ದೇವೆಗೌಡರ  ಗೆಲುವಿಗೆ ಇದ್ದ ಅಡ್ಡಿಗಳೆಲ್ಲ ನಿವಾರಣೆಯಾದಂತಾಗಿದ್ದು, ದೇವೆಗೌಡರು ಮತ್ತೊಮ್ಮೆ ಲೋಕಸಭೆ ಪ್ರವೇಶಿಸುವುದು ಖಚಿತವಾದಂತಾಗಿದೆ. 
 


ಸಂಬಂಧಿತ ಟ್ಯಾಗ್ಗಳು

#Loksabha 2019 #Tumkur #Muddahanumegwoda Devegwoda


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ