ಮೋದಿ ಫ್ಯಾನ್ಸ್ ವಿರುದ್ಧ ಚುನಾವಣಾ ಆಯೋಗಕ್ಕೆ ರಮ್ಯ ದೂರು 

Ramya Complains to Election Commission against Modi fans

29-03-2019

ಲೋಕಸಭೆ ಚುನಾವಣೆ ಘೋಷಣೆ ಬಳಿಕವೂ ರಾಜ್ಯದ ಚುನಾವಣಾ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡ ಮಾಜಿ ಸಂಸದೆ ರಮ್ಯ ದೆಹಲಿಯಲ್ಲಿ ತಮ್ಮನ್ನು ತಾವು ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಮೋದಿ ಅಭಿಮಾನಿಗಳಿಂದ ಟೀಕೆಗೆ ಒಳಗಾಗುವ ರಮ್ಯ ಈ ಬಾರಿ ಮೋದಿ ಅಭಿಮಾನಿಗಳ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. 

ಹೌದು ಸಾಮಾಜಿಕ ಜಾಲತಾಣದಲ್ಲಿ ಮೋದಿ ಅಭಿಮಾನಿಗಳು ಮತದಾರರಿಗೆ ಆಮಿಷ್ ಒಡ್ಡುತ್ತಿದ್ದಾರೆ ಎಂದು ರಮ್ಯ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಕೌಂಟ್ ಹೊಂದಿರುವ ಮೋದಿ ಅಭಿಮಾನಿಗಳು, ಉಚಿತ ಕೊಡುಗೆ, ಫ್ರೀ ಗಿಫ್ಟ್‍ಹಂಚಿಕೆ ಸೇರಿದಂತೆ ವಿವಿಧ ರೀತಿಯಲ್ಲಿ ಮತದಾರರನ್ನು ಮೋದಿಯತ್ತ ಹಾಗೂ ಬಿಜೆಪಿಯತ್ತ ಸೆಳೆಯುತ್ತಿದ್ದಾರೆ. ಇದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯ, ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. 
ಈ ರೀತಿ ಆಫರ್‍ಗಳನ್ನು ನೀಡುವ ಮೂಲಕ ಮೋದಿ ಅಭಿಮಾನಿಗಳು ಮತದಾರರನ್ನು ಒಲೈಸುತ್ತಿದ್ದಾರೆ. ಇವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ರಮ್ಯ ಒತ್ತಾಯಿಸಿದ್ದಾರೆ. ದೂರಿನಲ್ಲಿ ಇಂತಹ ಖಾತೆಗಳ ವಿವರಗಳನ್ನು ರಮ್ಯ ಒದಗಿಸಿದ್ದಾರೆ. 
ಬಹುತೇಕ ರಾಜ್ಯ ರಾಜಕಾರಣದಿಂದಲೇ ಮರೆಯಾಗಿರುವ ರಮ್ಯ ದೆಹಲಿಯಲ್ಲೇ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳನ್ನು ನೋಡಿಕೊಳ್ಳುವುದರಲ್ಲಿ ನಿರತವಾಗಿದ್ದಾರೆ. ಹಿರಿಯ ನಟ ಹಾಗೂ ರಮ್ಯರನ್ನು ರಾಜಕೀಯದಲ್ಲಿ ಅಪಾರವಾಗಿ ಸಪೋರ್ಟ್ ಮಾಡಿದ್ದ ಅಂಬರೀಶ್ ನಿಧನರಾದ ಸಂದರ್ಭದಲ್ಲೂ ರಮ್ಯ ರಾಜ್ಯಕ್ಕೆ ಬಂದಿರಲಿಲ್ಲ. ಈಗ ಮಂಡ್ಯ ರಾಜಕಾರಣ ದೇಶದ ಗಮನ ಸೆಳೆದಿದ್ದರೂ ರಮ್ಯ ಮಾತ್ರ ರಾಜ್ಯದತ್ತ ಮುಖಮಾಡುವ ಮುನ್ಸೂಚನೆ ಇಲ್ಲ. 
ಸದಾ ರಾಜಕೀಯದ ಆಗುಹೋಗು ಹಾಗೂ ಮೋದಿ ಕಾರ್ಯವೈಖರಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕಿಸುತ್ತಲೇ ಸುದ್ದಿಯಾಗುವ ರಮ್ಯ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸದೇ ಗೈರಾಗಿದ್ದು, ಸಾಕಷ್ಟು ವಿವಾದ ಸೃಷ್ಟಿಸಿದ್ದು ಓಟು ಹಾಕಲೂ ಬಾರದ ರಮ್ಯ ರಾಜಕಾರಣ ಮಾತನಾಡುತ್ತಾರೆ ಎಂದು ಜನರು ಟೀಕಿಸಿದ್ದರು. 
 


ಸಂಬಂಧಿತ ಟ್ಯಾಗ್ಗಳು

#Narendra Modi #Ramya #Complent #Modi Fans


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ