ಪಕ್ಷದಿಂದ ಹೊರಬಂದ ಲಾಲೂ ಪುತ್ರ 

 Lalu

29-03-2019

ಲೋಕಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ದೇಶದಲ್ಲಿ ರಾಜಕೀಯ ಮೇಲಾಟಗಳು-ಸಂಚಲನಗಳು ತೀವ್ರಗೊಂಡಿದೆ. ಹೀಗಿರುವಾಗಲೇ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಕುಟುಂಬದಲ್ಲಿ ಅಸಮಧಾನ ಭುಗಿಲೆದ್ದಿದೆ.  ರಾಷ್ಟ್ರೀಯ ಜನತಾ ದಳ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಲಾಲೂ ಪುತ್ರ ತೇಜ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. 
ತೇಜ್ ಪ್ರತಾಪ್ ಯಾದವ್ ತಮ್ಮ ಪಕ್ಷದಿಂದ ಕೆಲ ಆಪ್ತರಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದರು. ಆದರೆ ಇದು ಸಾಧ್ಯವಾಗಿರಲಿಲ್ಲ. ಹೀಗಾಗಿ ತೇಜ್‍ನೊಂದು ಪಕ್ಷದ ತಮ್ಮ ಜವಾಬ್ದಾರಿಗೆ ರಾಜೀನಾಮೆ ನೀಡಿದ್ದಾರೆ ಎಂದು ಭಾವಿಸಲಾಗಿದೆ. ಇನ್ನೊಂದೆಡೆ ಇದು ತೇಜ್ ಅವರ ಬ್ಲಾಕ್‍ಮೇಲ್ ತಂತ್ರವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅರ್ಥೈಸಿದ್ದಾರೆ. 


ರಾಜೀನಾಮೆ ಬಳಿಕ ಟ್ವಿಟ್‍ನಲ್ಲಿ ತಮ್ಮ ಅಸಮಧಾನ ತೋಡಿಕೊಂಡಿರುವ ತೇಜ್,  ಆರ್‍ಜೆಡಿ ಯುವ ಘಟಕದಲ್ಲಿನ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನನಗೆ ರಾಜಕೀಯ ಜ್ಞಾನ ಹಾಗೂ ತಿಳುವಳಿಕೆ ಕಡಿಮೆ ಎಂದು ಕೆಲವರು ಭಾವಿಸಿದ್ದಾರೆ. ಆದರೆ ನನಗೆ ಎಲ್ಲವೂ ಅರ್ಥವಾಗುತ್ತದೆ ಎಂದು ಅವರು ಕಿಡಿಕಾರಿದ್ದಾರೆ. 


ತೇಜ್ ಪ್ರತಾಪ್ ತಂದೆಯ ಪಕ್ಷದಲ್ಲಿ ಜವಾಬ್ದಾರಿ ವಹಿಸಿಕೊಂಡಾಗಿನಿಂದಲೂ ತನಗಿಂತ ಹೆಚ್ಚಿನ ಪ್ರಾಮುಖ್ಯತೆ ತನ್ನ ಕಿರಿಯ ಸಹೋದರನಿಗೆ ಸಿಗುತ್ತಿದೆ ಎಂಬ ಅಸಮಧಾನ ಹೊಂದಿದ್ದರು.  ತೇಜ್ ಸಹೋದರ  ತೇಜಸ್ವಿ ಬಿಹಾರದಲ್ಲಿ ವಿರೋಧ ಪಕ್ಷದ ನಾಯಕನಾಗಿ ಸಹ ಕೆಲಸ ಮಾಡಿದ್ದು, ಲಾಲೂ ಪ್ರಸಾದ್ ಯಾದವ್ ಕೂಡ ತಮ್ಮ ಕಿರಿಯ ಮಗನನ್ನೇ ಉತ್ತರಾಧಿಕಾರಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಎಲ್ಲ ಅಸಮಧಾನಗಳಿಂದ ತೇಜ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ. 
 


ಸಂಬಂಧಿತ ಟ್ಯಾಗ್ಗಳು

#Loksabha 2019 #Lalu Prasad Yadav #RJD #Tej Pratap Yadav


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ