ಚುನಾವಣೆಗೆ ಮುನ್ನವೇ, ಬಿಜೆಪಿ ಅಭ್ಯರ್ಥಿ ಜೈಲಿಗೆ 

Prior to the Election, BJP Candidate Jailed

29-03-2019

ಎಲ್ಲೆಡೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿದ್ದರೆ ಕೇರಳದಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿಯೇ ಜೈಲು ಪಾಲಾಗಿದ್ದಾರೆ. ಹೌದು  ಮಹಿಳೆಯೊರ್ವಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲ ಪಕ್ಷದ ಅಭ್ಯರ್ಥಿ ಪ್ರಕಾಶ್ ಬಾಬು ಜೈಲು ಸೇರಿದ್ದಾರೆ. 

ಕೋಯಿಕ್ಕೋಡ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ  ಪ್ರಕಾಶ್ ಬಾಬು,  ಕಳೆದ ನವೆಂಬರ್‍ನಲ್ಲಿ ಶಬರಿಮಲೈ ದೇವಸ್ಥಾನಕ್ಕೆ  ಪ್ರವೇಶಿಸಲು ಯತ್ನಿಸಿದ ಮಹಿಳಾ ಭಕ್ತರೊಬ್ಬರ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಮೇಲೆ ಪ್ರಕರಣ ದಾಖಲಾಗಿತ್ತು. 
ಪ್ರಕರಣ ದಾಖಲಾಗಿದ್ದರೂ ಬಿಜೆಪಿ ಪ್ರಕಾಶ್ ಬಾಬುಗೆ ಟಿಕೇಟ್ ನೀಡಿತ್ತು. ಆದರೆ ಗುರುವಾರ ಜಿಲ್ಲಾ ನ್ಯಾಯಾಲಯದಲ್ಲಿ ಈ ಪ್ರಕರಣ ವಿಚಾರಣೆಗೆ ಬಂದಿದ್ದು, ಪ್ರಕಾಶ್ ಬಾಬು ಅವರಿಗೆ ನ್ಯಾಯಾಲಯ  14 ದಿನಗಳ ನ್ಯಾಯಾಂಬ ಬಂಧನಕ್ಕೆ ಆದೇಶಿಸಿದೆ. 
ಅಲ್ಲದೆ ಜಾಮೀನು ನೀಡಲು ನಿರಾಕರಿಸಿದೆ. ಹೀಗಾಗಿ ಪ್ರಕಾಶ್ ಬಾಬು, ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ. 
ಇನ್ನು ನ್ಯಾಯಾಂಗ ಬಂಧನ ವಿಧಿಸಲಾಗಿರುವುದರಿಂದ ಪ್ರಕಾಶ್ ಬಾಬು ಅವರನ್ನು ಕೊತ್ತರಕ್ಕರಾ ಜೈಲ್‍ಗೆ ಸ್ಥಳಾಂತರಿಸಲಾಗಿದೆ. 
ಏಪ್ರಿಲ್ 23 ರಂದು ಕೇರಳದಲ್ಲಿ ಮತದಾನ ನಡೆಯಲಿದ್ದು, ಪ್ರಕಾಶ್ ಬಾಬು ಇನ್ನು ನಾಮಪತ್ರ ಸಲ್ಲಿಸಿ ಪ್ರಚಾರ ನಡೆಸಬೇಕಿತ್ತು. ಆದರೆ ಈಗ ಅವರೇ ಜೈಲು ಸೇರಿರೋದರಿಂದ ಬಿಜೆಪಿ ಮುಂದಿನ ತೀರ್ಮಾನವೇನು ಎಂಬುದು ಕುತೂಹಲ ಮೂಡಿಸಿದೆ. 
ಸಪ್ಟೆಂಬರ್ 28 ರಂದು ಸುಪ್ರೀಂಕೋರ್ಟ್ ಶಬರಿಮಲೈ ಅಯ್ಯಪ್ಪ ದೇವಾಲಯಕ್ಕೆ ಹೆಣ್ಣುಮಕ್ಕಳಿಗೂ ಪ್ರವೇಶಕ್ಕೂ ಅವಕಾಶ ನೀಡಿ ಆದೇಶ ಹೊರಡಿಸಿತ್ತು. ಆದರೆ ಈ ಆದೇಶದನ್ವಯ ದೇವಾಲಯದ ಒಳಪ್ರವೇಶಕ್ಕೆ ಯತ್ನಿಸಿದ್ದ ಮಹಿಳೆಯರನ್ನು ಬಿಜೆಪಿ ಕಾರ್ಯಕರ್ತರು ತಡೆದಿದ್ದರು. ಈ ವೇಳೆ ಪ್ರಕಾಶ್ ಬಾಬು ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿತ್ತು. 


ಸಂಬಂಧಿತ ಟ್ಯಾಗ್ಗಳು

#Loksabha 2019 #Bjp #Kerala #Jailed


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ