ಅಧಿಕಾರಿಗಳ ಎತ್ತಂಗಡಿಗೆ ಬಿಜೆಪಿ ಮನವಿ 

 BJP appeals to Officers Transfer

28-03-2019

ರಾಜ್ಯದಲ್ಲಿ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ನ್ಯಾಯಯುತವಾದ ಹಾಗೂ ನಿಶ್ಪಕ್ಷಪಾತವಾದ ಚುನಾವಣೆ ನಡೆಸುವ ದೃಷ್ಟಿಯಿಂದ ಹಲವು ಅಧಿಕಾರಿಗಳನ್ನು ವರ್ಗಾಯಿಸುವಂತೆ ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ಈ ಬಗ್ಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. 

ಬೆಂಗಳೂರು ರಾಜ್ಯದ ವಿವಿಧ ಇಲಾಖೆಗಳ ಒಟ್ಟು 13 ಅಧಿಕಾರಿಗಳ ಹೆಸರನ್ನು ಈ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ನಿಶ್ಪಕ್ಷಪಾತ ಚುನಾವಣೆ ನಡೆಯಬೇಕಾದರೆ ಈ ಅಧಿಕಾರಿಗಳು ಈಗ ಕಾರ್ಯನಿರ್ವಹಿಸುತ್ತಿರುವ ಸ್ಥಳದಿಂದ ಬೇರೆಡೆಗೆ ವರ್ಗಾವಣೆಗೊಳ್ಳಬೇಕೆಂದು ಪತ್ರದಲ್ಲಿ ಮನವಿ ಮಾಡಲಾಗಿದೆ. 

ಬಿಬಿಎಂಪಿ ಹಾಲಿ ಆಯುಕ್ತ ಮಂಜುನಾಥ ಪ್ರಸಾದ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರಿಗೌಡ್, ಬೆಂಗಳೂರು ಡಿಸಿ ವಿಜಯ್ ಶಂಕರ್,  ಹಾಸನ ಉಪ ಆಯುಕ್ತ ಅಲಂಪಾಷಾ, ಹಾಸನ ಎಸ್‍ಪಿ ಪ್ರಕಾಶ್ ಗೌಡ್, ಮಂಡ್ಯ ಎಸ್‍ಪಿ, ತುಮಕೂರು,ಹಾಸನ,ಮಂಡ್ಯ,ರಾಮನಗರ ಅಬಕಾರಿ ಆಯುಕ್ತರು, ಬೀದರ ಜಿಲ್ಲಾಧಿಕಾರಿ  ಎಚ್.ಡಿ.ಮಹದೇವ್, ಕಲಬುರಗಿ ಡಿಸಿ  ವೆಂಕಟೇಶ್ ಕುಮಾರ್,  ಕಲ್ಬುರ್ಗಿ ಎಸ್‍ಪಿ ಎಡಾಮಾರ್ಟಿನ್ ಮಾರ್ಬಲಿಂಗ್, ಎಡಿಸಿ ಟಿ.ಯೋಗೇಶ್, ಶಶಿಕುಮಾರ್ ಡಿಸಿಪಿ ಬೆಂಗಳೂರು ಇವರುಗಳನ್ನು ವರ್ಗಾವಣೆ ಮಾಡುವಂತೆ ಪತ್ರದಲ್ಲಿ ಕೋರಲಾಗಿದೆ. 

 ಚುನಾವಣೆಯ ವೇಳೆಯಲ್ಲಿ ಆಡಳಿತದಲ್ಲಿರುವ ಸರ್ಕಾರದ ಅಧೀನದಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಾರೆ ಮತ್ತು ಸಿಎಂ ಹಾಗೂ ಸಚಿವರುಗಳು ಮಾತಿಗೆ ಹೆಚ್ಚಿನ ಬೆಲೆ ನೀಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತವೆ. ಹಾಗೂ ಕೆಲವೊಮ್ಮೆ ಆಡಳಿತ ಪಕ್ಷಗಳ ತಮಗೆ ಬೇಕಾದ ಅಧಿಕಾರಿಯನ್ನು ತಮಗೆ ಅಗತ್ಯವಿರುವ ಕಡೆ ಪೋಸ್ಟ್ ಮಾಡಿಸಿಕೊಂಡಿರುವ ಸಾಧ್ಯತೆಯೂ ಇರುತ್ತದೆ. ಹೀಗಾಗಿಯೇ ವರ್ಗಾವಣೆ ಕೋರಿ ಬಿಜೆಪಿ ಚುನಾವಣಾ ಆಯೋಗದ ಮೊರೆ ಹೋಗಿದೆ. 


ಸಂಬಂಧಿತ ಟ್ಯಾಗ್ಗಳು

#Loksabha 2019 #Officers #Transfer Letter


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ