ಕೈಬಂಡಾಯ ಅಭ್ಯರ್ಥಿ ಮುದ್ದಹನುಮೇಗೌಡ ನಾಮಪತ್ರ ತಿರಸ್ಕಾರ

Congres Candidate Muddahanumegwoda  Nomination rejected

28-03-2019

ಮಾಜಿ ಪ್ರಧಾನಿ ದೇವೆಗೌಡರು ಕಣಕ್ಕಿಳಿದಿರೋದರಿಂದ ಹೈವೋಲ್ಟೇಜ್ ಕ್ಷೇತ್ರವಾಗಿರುವ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಎಂಪಿಯಾಗುವ ಉದ್ದೇಶದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಸ್.ಪಿ.ಮುದ್ದಹನುಮೆಗೌಡರ್ ನಾಮಪತ್ರ ತಿರಸ್ಕøತವಾಗಿದೆ. 
 ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ನೀರಿಕ್ಷೆಯಲ್ಲಿದ್ದ ಮುದ್ದಹನುಮೇಗೌಡರಿಗೆ ಕಾಂಗ್ರೆಸ್ ಮೈತ್ರಿಯನ್ನು ಮುಂದಿಟ್ಟುಕೊಂಡು ಟಿಕೇಟ್ ನಿರಾಕರಿಸಿತ್ತು. ಇದರಿಂದ ಆಕ್ರೋಶಗೊಂಡ ಮುದ್ದಹನುಮೇಗೌಡರು ಸ್ವತಂತ್ರವಾಗಿ ಸ್ಪರ್ಧಿಸುವ ತೀರ್ಮಾನಕೈಗೊಂಡು ಕೈಪಾಳಯದ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದರು. 

ನಾಮಪತ್ರ ಸಲ್ಲಿಸುವ ವೇಳೆಯೂ ಕಾಂಗ್ರೆಸ್  ತಮ್ಮನ್ನು ಬೆಂಬಲಿಸಬಹುದೆಂಬ ನೀರಿಕ್ಷೆಯಲ್ಲಿದ್ದ ಮುದ್ದಹನುಮೇಗೌಡರು ಎರಡು ನಾಮಪತ್ರ ಸಲ್ಲಿಸಿದ್ದರು. ಒಂದು ನಾಮಪತ್ರ ಕಾಂಗ್ರೆಸ್‍ನಿಂದ ಸಲ್ಲಿಸಿದ್ದರೆ, ಇನ್ನೊಂದು ನಾಮಪತ್ರವನ್ನು ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿದ್ದರು. 
ಇದೀಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರ ತಿರಸ್ಕøತಗೊಂಡಿದೆ. ಕಾಂಗ್ರೆಸ್ ಪಕ್ಷದ ಬಿಫಾರ್‍ಂ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಈ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ.ಮುದ್ದಹನುಮೇಗೌಡರು ಪಕ್ಷೇತರವಾಗಿ ಸಲ್ಲಿಸಿದ ನಾಮಪತ್ರ ಅಂಗೀಕಾರವಾಗಿದೆ. 

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೆಗೌಡರು ಕಣಕ್ಕಿಳಿಯಲಿದ್ದು, ಅವರನ್ನು ಗೆಲ್ಲಿಸುವ ಹೊಣೆಗಾರಿಕೆ ಕಾಂಗ್ರೆಸ್ ನಾಯಕರ ಹೆಗಲೇರಿದೆ.ಆದರೆ ಕಾಂಗ್ರೆಸ್ ನಾಯಕರು ಮುದ್ದಹನುಮೇಗೌಡ ಬಂಡಾಯದಿಂದ ಕಂಗಾಲಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಮುದ್ದಹನುಮೇಗೌಡರನ್ನೇ ಬೆಂಬಲಿಸುವ ಸಾಧ್ಯತೆ ಇದೆ. ಹಾಗಾದಲ್ಲಿ  ಮಾಜಿ ಪ್ರಧಾನಿ ಗೌಡರ್ ಗೆಲುವು ಕಷ್ಟವಾಗಲಿದೆ. 
ಹೀಗಾಗಿ ಪಕ್ಷೇತರರಾಗಿ ಸ್ಪರ್ಧಿಸಿರುವ  ಮುದ್ದಹನುಮೇಗೌಡರ್ ಮನವೊಲಿಸುವ ಪ್ರಯತ್ನದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನಿರತರಾಗಿದ್ದಾರೆ. ನಾಮಪತ್ರ ಹಿಂಪಡೆಯಲು ಮಾರ್ಚ್ 29 ಕೊನೆಯ ದಿನವಾಗಿದ್ದು, ಕಾಂಗ್ರೆಸ್ ದೇವೆಗೌಡರ್ ಹಾದಿ ಸುಗಮವಾಗಿಸಲು ಮುದ್ದಹನುಮೇಗೌಡರ್ ಸ್ಪರ್ಧೆ ತಪ್ಪಿಸಲು ಸರ್ಕಸ್ ಆರಂಭಿಸಿದೆ. ಇನ್ನೊಂದೆಡೆ ಇನ್ನೊರ್ವ ಕಾಂಗ್ರೆಸ್ಸಿಗ ಕೆ.ಎನ್.ರಾಜಣ್ಣ ಕೂಡ ಕಾಂಗ್ರೆಸ್‍ಗೆ ಸೆಡ್ಡು ಹೊಡೆದು ಏಕಾಂಗಿ ಸ್ಪರ್ಧೆಗೆ ಸಿದ್ಧವಾಗಿದೆ. ಒಟ್ಟಿನಲ್ಲಿ ತುಮಕೂರು ಬಿಜೆಪಿ ಮತ್ತು ಜೆಡಿಎಸ್-ಕಾಂಗ್ರೆಸ್ ನಡುವಿನ ಫೈಟ್ ಆಗೋದಕ್ಕಿಂತ ಹೆಚ್ಚು ಕಾಂಗ್ರೆಸ್ ಹಾಗೂ ಜೆಡಿಎಸ್ ಫೈಟ್ ಎದುರಾಗುವ ಮುನ್ಸೂಚನೆ ಲಭ್ಯವಾಗಿದೆ. 


ಸಂಬಂಧಿತ ಟ್ಯಾಗ್ಗಳು

#Loksabha 2019 #Nomination #Muddahanumegwoda #Rejected


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ