ತೇಜಸ್ವಿ ಸೂರ್ಯ ಕುಟುಂಬದ ಕಾಂಗ್ರೆಸ್ ನಂಟು

Tejasvi is a Congress member of the Surya family

28-03-2019

ಇಪ್ಪತ್ತೊಂಬತ್ತು ವರ್ಷ ವಯಸ್ಸಿನ ತೇಜಸ್ವಿ ಸೂರ್ಯ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು ಆಶ್ಚರ್ಯವಲ್ಲ. ಬಹಳ ದಿನಗಳಿಂದ ಮೋದಿ ಗುಣಗಾನ ಮಾಡಿಕೊಂಡು ಬಂದಿರುವ ತೇಜಸ್ವಿ ಬಿಜೆಪಿಯ ಅನಧಿಕೃತ ವಕ್ತಾರರಾಗಿಯೇ ಕಾರ್ಯ ನಿರ್ವಹಿಸಿದ್ದಾರೆ. ಹಿಂದೂ ಧರ್ಮದ ಬಗ್ಗೆ ಪ್ರಖರ ಭಾಷಣಗಳನ್ನೂ ಮಾಡಿ ತಾನೊಬ್ಬ ಸಂಪ್ರದಾಯವಾದಿ ಎಂದು ತೋರಿಸಿಕೊಟ್ಟಿರುವ ತೇಜಸ್ವಿ,  ಬಿಜೆಪಿ ಹಿಂದೂಗಳ ಪಕ್ಷವಾಗಿ ಗುರುತಿಸಿಕೊಳ್ಳಬೇಕು ಎಂದು ಹೇಳಿದವರು. ತಮ್ಮ ಭಾಷಣ ಮತ್ತು ಬರವಣಿಗೆಗಳ ಮೂಲಕ ಜನರ ಗಮನ ಸೆಳೆದ ತೇಜಸ್ವಿ ಬಗ್ಗೆ ಬಿಜೆಪಿಯಲ್ಲಿಯೇ ಅನೇಕರಿಗೆ ಗೊತ್ತಿಲ್ಲ. ಆರ್ ಎಸ್ ಎಸ್ ಮಾದರಿಯ ಭಾಷಣ ಬಿಗಿಯುವ ತೇಜಸ್ವಿ ಸೂರ್ಯ ಅವರ ರಾಜಕೀಯ ಹಿನ್ನೆಲೆ ಆರ್ ಎಸ್ ಎಸ್  ಅಥವ ಬಿಜೆಪಿ ಅಲ್ಲ ಎಂಬುದು ಅನೇಕರಿಗೆ ತಿಳಿಯದ ವಿಚಾರ. ತೇಜಸ್ವಿ ಸೂರ್ಯ ಅವರ ಚಿಕ್ಕಪ್ಪ ಎಂ ಎಲ್ ಎ ರವಿ ಸುಬ್ರಮಣ್ಯ ಅವರ ತುಂಬು ಕುಟುಂಬದಲ್ಲಿ ಬೆಳೆದ ತೇಜಸ್ವಿ, ಚಿಕ್ಕಪ್ಪನ ರಾಜಕೀಯ ಪ್ರಭಾವದ ಅಡಿಯಲ್ಲಿ ಚಿಗುರಿದವರು. ಚಿಕ್ಕಪ್ಪನ ಪ್ರೀತಿಯೊಂದಿಗೆ ಒಂದಷ್ಟು ರಾಜಕೀಯ ಆಸಕ್ತಿಯನ್ನೂ ಬೆಳೆಸಿಕೊಂಡವರು. ಆದರೆ ಈ ಕುಟುಂಬದ ಮೂಲ ಬಿಜೆಪಿಯಲ್ಲ ಎಂಬುದು ಅನೇಕರಿಗೆ ಗೊತ್ತಿಲ್ಲದ ಸಂಗತಿ. ರವಿ ಸುಬ್ರಮಣ್ಯ ಕಾಂಗ್ರೆಸ್ ನಿಂದ ಬಿಜೆಪಿಗೆ ವಲಸೆ ಬಂದವರು. ಜಾತಿ ಆಧಾರದಲ್ಲಿ ಸೀಟು ಗಿಟ್ಟಿಸಿಕೊಂಡು ಎಂ ಎಲ್ ಆ  ಆದವರು. ತಮ್ಮ ಸೆಕ್ಯುಲರ್ ಚಿಂತನೆಗಳ ಬಗ್ಗೆ ಈಗಲೂ ಹೆಮ್ಮೆ ಪಡುವವರು ಮತ್ತು ವಿಪರೀತ ಹಿಂದುತ್ವವಾದದ ವಿರುದ್ಧ ಅಭಿಪ್ರಾಯ ಇಟ್ಟುಕೊಂಡವರು ಮತ್ತು ಹಿಂದುತ್ವ ವಾದಿಗಳಿಂದ ಒಂದಷ್ಟು ದೂರವನ್ನೇ ಕಾಯ್ದುಕೊಂಡವರು. ಇಂಥವರ ಮನೆಯಲ್ಲಿ ಅವರ ಗರಡಿಯಲ್ಲೇ ಬೆಳೆದ ತೇಜಸ್ವಿ ಅಂಥಾ ಕಟು ಹಿಂದುತ್ವವಾದಿಯಾಗಲು ಏನು ಕಾರಣ ಎಂದು ಹುಡುಕುತ್ತಾ ಹೊರಟರೆ ಅದು ಸ್ವಾಭಾವಿಕ ಎನ್ನುವುದಕ್ಕಿಂತ ಹೆಚ್ಚಾಗಿ ರಾಜಕೀಯ ಲಾಭದ ಆಲೋಚನೆಯ ಫಲ ಎಂದು ಹೇಳಬಹುದು. 
ಚಿಕ್ಕಪ್ಪನ ಪ್ರಭಾವ ಬೆಳೆಸಿ ಬಿಜೆಪಿಯಲ್ಲಿ ಜಾಗ ಮಾಡಿಕೊಂಡ ತೇಜಸ್ವಿ ತಮ್ಮ ತೀಕ್ಷ್ಣ ಆಲೋಚನೆ ಮತ್ತು ಮಾತುಗಳಿಂದ ಪಕ್ಷದ ಗಮನ ಸೆಳೆದಿದ್ದು ಮತ್ತು ಈಗ ಲೋಕಸಭಾ ಅಭ್ಯರ್ಥಿಯೂ ಆಗಿರುವುದು ಒಂದು ವ್ಯವಸ್ಥಿತ ಯೋಜನೆಯ ಫಲ ಎಂದು ಬಿಜೆಪಿಯಲ್ಲಿಯೂ ಅನೇಕರು ಹೇಳುತ್ತಿದ್ದಾರೆ. ಆದರೆ ಟಿಕೆಟ್ ಸಿಕ್ಕಾಕ್ಷಣ ಅದು ಗೆಲುವಿಗೆ ರಹದಾರಿ ಎಂದು ಹೇಳಲು ಆಗುವುದಿಲ್ಲ. ಕಾಂಗ್ರೆಸ್ ಮತ್ತು ಜೆ ಡಿ ಎಸ್ ಮೈತ್ರಿ ಅಭ್ಯರ್ಥಿ ಬಿ ಕೆ ಹರಿಪ್ರಸಾದ್ ಗೆ ಯೌವನದ ಸಂಗದೋಷದ ಕಳಂಕವಿದ್ದು ಈ ಬಾರಿ ರಾಜಕೀಯ ವಿರೋಧಿ ರಾಮಲಿಂಗಾ ರೆಡ್ಡಿಯವರ ಬೆಂಬಲವಿಲ್ಲದಿದ್ದರೂ ಅನೇಕರು ಅವರ ಸ್ವಚ್ಛ ರಾಜಕೀಯ ಇತಿಹಾಸ ಮತ್ತು ಅನುಭವವವನ್ನು ಪರಿಗಣಿಸಬಹುದೆಂದು ಹೇಳಲಾಗಿದೆ. ಮತ್ತು ಹಿಂದುಳಿದ ವರ್ಗಾಕೀ ಸೇರಿದ ಅವರಿಗೆ ಆ ವರ್ಗಗಳ ಬೆಂಬಲ ಬರುವ ಸಾಧ್ಯತೆಯೂ ಇದೆ. ಅದೇ ತೇಜಸ್ವಿ ಸೂರ್ಯ ಅವರಿಗೆ ಮುಳುವಾಗಬಹುದೆಂದೂ ಹೇಳಲಾಗಿದೆ.


ಸಂಬಂಧಿತ ಟ್ಯಾಗ್ಗಳು

Tejasvi Congress ತೇಜಸ್ವಿ ಕಾಂಗ್ರೆಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ