ಮೊದಲ ಹಂತದ ಚುನಾವಣೆಗೆ ಸಕಲ ಸಿದ್ದತೆ -ಸಂಜೀವ್ ಕುಮಾರ್

 Ready for first phase polls, Sanjeev Kumar

27-03-2019

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಏ. 18 ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ನಡೆಯುವ ಮತದಾನವನ್ನು ಶಾಂತಯುತವಾಗಿ  ಎಲ್ಲಾ ರೀತಿಯ ಸಿದ್ದತೆ ನಡೆಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ತಿಳಿಸಿದ್ದಾರೆ.
ಚುನಾವಣೆಯ ಅಕ್ರಮಗಳನ್ನು ತಡೆಯಲು 1512 ಪ್ಲೈಯಿಂಗ್ ಸ್ಕ್ವಾಡ್, 1837 ವಿಚಕ್ಷಣಾ ದಳ, 320 ಅಬಕಾರಿ ತಂಡಗಳು ಹಾಗೂ 180 ವಾಣಿಜ್ಯ ತೆರಿಗೆ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಹೇಳಿದರು.
ಚುನಾವಣೆಯ ಹಿನ್ನಲೆಯಲ್ಲಿ ಅಕ್ರಮ ಚಟುವಟಿಕೆಗಳ ಸಂಬಂಧ ಇದುವರೆಗೂ ಒಟ್ಟು 4,4707,871 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. 2359.854 ಲೀ. ಅಂದರೆ 24,25,588.30 (ಕೋಟಿ ಮೌಲ್ಯ), 5,64,800 ಲಕ್ಷ ಮೌಲ್ಯದ 129 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವುದರೊಂದಿಗೆ 264 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಆದಾಯ ತೆರಿಗೆ ಇಲಾಖೆ 1,67,48,500 ಕೋಟಿ ನಗದನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದರು.
ಮೊದಲ ಹಂತದ ಚುನಾವಣೆಗೆ 362 ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟು 445 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. 455 ನಾಮಪತ್ರಗಳಲ್ಲಿ 333 ಪುರುಷ ಅಭ್ಯರ್ಥಿಗಳು ಮತ್ತು 25 ಮಹಿಳಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಏ. 18 ರಂದು ನಡೆಯುವ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ (ಮೀಸಲು), ಚಾಮರಾಜನಗರ (ಮೀಸಲು), ಕೋಲಾರ (ಮೀಸಲು) ಮೂರು ಕ್ಷೇತ್ರಗಳಲ್ಲಿ 64 ಅಭ್ಯರ್ಥಿಗಳು ಕಣದಲ್ಲಿದ್ದು, 79 ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 
ಚಿತ್ರದುರ್ಗ (ಪರಿಶಿಷ್ಠ ಜಾತಿ) ಕ್ಷೇತ್ರಕ್ಕೆ 26 ಅಭ್ಯರ್ಥಿಗಳಿಂದ 31 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಗಳಿಲ್ಲ. ಚಾಮರಾಜನಗರ (ಪರಿಶಿಷ್ಠ ಜಾತಿ) 13 ಅಭ್ಯರ್ಥಿಗಳಿಂದ 18 ನಾಮಪತ್ರ ಸಲ್ಲಿಸಿದ್ದು, ಎಲ್ಲರೂ ಪುರುಷ ಅಭ್ಯರ್ಥಿಗಳೆಂದು ತಿಳಿಸಿದರು ಕೋಲಾರ (ಪರಿಶಿಷ್ಠ ಜಾತಿ) 25 ಅಭ್ಯರ್ಥಿಗಳು 30 ನಾಮಪತ್ರಗಳನ್ನು ಸಲ್ಲಿಸಿದ್ದು, ಎಲ್ಲರೂ ಪುರುಷ ಅಭ್ಯರ್ಥಿಗಳೇ ಆಗಿದ್ದಾರೆ ಎಂದು ತಿಳಿಸಿದರು.
ಮತದಾರರಿಗೆ ಮಾಹಿತಿ
ಸೇವಾ ಮತದಾರರು ಮತ ಚಲಾಯಿಸಲು ಅರ್ಜಿ ನಮೂನೆ 2ರ ಮೂಲಕ ನೋಂದಾಯಿಸಿಕೊಳ್ಳಬೇಕು. ಸಶಸ್ತ್ರ ಪಡೆಯಲ್ಲಿರುವ ರಾಜ್ಯದ ಸದಸ್ಯರು, ಬೇರೆ ಬೇರೆ ರಾಜ್ಯಗಳಲ್ಲಿ ಸೇವಿ ಸಲ್ಲಿಸುತ್ತಿರುವವರು ಅರ್ಜಿ ನಮೂನೆ 2ಎ ಮೂಲಕ ನೋಂದಾಯಿಸಿಕೊಳ್ಳಬೇಕು.
ಭಾರತದ ಹೊರ ಭಾಗದಲ್ಲಿ ಅಂದರೆ ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರಿ ನೌಕರರು ಅರ್ಜಿ ನಮೂನೆ 3ರ ಮೂಲಕ ಮತ ಚಲಾವಣೆಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಒಟ್ಟು 39,512 ಸೇವಾ ಮತದಾರರಿದ್ದು, ಅವುಗಳಲ್ಲಿ 38,715 ಪುರುಷ ಮತ್ತು 797 ಮಹಿಳಾ ಮತದಾರರಿದ್ದಾರೆ. ಭಾರತ ಸರ್ಕಾರದ ಸೇವೆಯಲ್ಲಿ ವಿದೇಶದಲ್ಲಿ 20 ಪುರುಷರು, 7 ಮಹಿಳೆಯರೂ ಸೇರಿದಂತೆ 27 ಜನ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿದ ಅವರು, ಬೆಳಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು 1991 ಮತದಾರರು ನೋಂದಾಯಿಸಿಕೊಂಡಿರುವುದಾಗಿ ತಿಳಿಸಿದರು.
 


ಸಂಬಂಧಿತ ಟ್ಯಾಗ್ಗಳು

#Election 2019 #Voting #April 18 #Sanjeev Kumar


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ