ನಟ ದರ್ಶನ್‍ಗೆ ಟಾಂಗ್ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ

 Kumarswamy is the chief minister given to Tang for actor Darshan

27-03-2019

ಸುಮಲತಾ ಅಂಬರೀಷ್ ಅವರ ಪರವಾಗಿ ಚುನಾವಣಾ ಪ್ರಚಾರದ ಕಣಕ್ಕಿಳಿದಿರುವ ಚಿತ್ರ ನಟ ದರ್ಶನ್‍ಗೆ ಟಾಂಗ್ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ,ಯಾರೋ ನಾಲ್ಕೈದು ಮಂದಿ ಅಭಿಮಾನಿಗಳು ಸೇರಿ ಡಿ ಬಾಸ್ ಎಂದ ಕೂಡಲೇ ಅದು ಆರೂವರೆ ಕೋಟಿ ಕನ್ನಡಿಗರು ಸೇರಿ ಕೊಟ್ಟ ಸರ್ಟಿಫಿಕೇಟು ಎಂದು ಪರಿಗಣಿಸಲಾಗದು ಎಂದಿದ್ದಾರೆ.

ಡಿ ಬಾಸ್ ಬಿರುದು ಅಭಿಮಾನಿಗಳು ಕೊಟ್ಟಿರುವ ಭಿಕ್ಷೆ ಎಂಬ ದರ್ಶನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಅವರು, ಡಿ ಬಾಸ್ ಅಂತಾಯಾರೋ ನಾಲ್ಕೈದು ಅಭಿಮಾನಿಗಳು  ಕೊಟ್ಟಿರೋದು. ಅದೇನುಆರೂವರೆಕೋಟಿಜನರು ಬಿರುದುಕೊಟ್ಟಿದ್ದಾರಾ ಎಂದುತಿರುಗೇಟು ನೀಡಿದ್ದಾರೆ.

ಜೆ.ಪಿ.ನಗರದತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಈಗ ನನ್ನ ಮಗನಿಗೂ ಕೂಡ ಯುವರಾಜ ಅಂತಾ ಬಿರುದು ಕೊಟ್ಟಿದ್ದಾರೆ.

ಅವನು ಈಗ ಯುವರಾಜನಾ ?. ಅವನಿಗೆ ಯಾರೋ ನಾಲ್ಕು ಜನ ಅಭಿಮಾನಿಗಳು ಬಿರುದುಕೊಟ್ಟಿರೋದು. ಹಾಗಂತ ನಾವು ಏನೋ ದೊಡ್ಡದಾಗಿ ಮೆರೆಯೋಕೆ ಆಗುತ್ತಾ ಎಂದು ನಟದರ್ಶನ್ ಗೆ ಟಾಂಗ್‍ಕೊಟ್ಟರು.

ಮಂಡ್ಯದಲ್ಲಿ ನಿಖಿಲ್ ಗೆಲ್ಲಿಸಿದರೆ ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರ ಸಂಬಂಧ ಮಾತನಾಡಿದ ಸಿಎಂ, ಇದನ್ನು ಹೋಗಿ ಅವರನ್ನೇ ಕೇಳಿ ಎಂದರು.

ಮಂಡ್ಯದಲ್ಲಿ ಅಂಬರೀಶ್ ಹೆಸರನ್ನು ಸುಮಲತಾ ಅವರು ಉಪಯೋಗ ಮಾಡಿಕೊಳ್ಳುತ್ತಿದ್ದಾರೆಯೇ ಹೊರತು, ನಾನು ಎಲ್ಲಾದರೂ ಅಂಬರೀಶ್ ಹೆಸರು ಬಳಸಿದ್ದೀನಾ?. ನಾನು ದುಡಿಮೆಯ ಹೆಸರಿನಲ್ಲಿ ಮತ ಕೇಳುತ್ತಿದ್ದೇನೆ. ನಾನು ಎಲ್ಲಿಯೂ ಅಂಬರೀಶ್ ಹೆಸರು ಬಳಸಿಲ್ಲ ಎಂದು ಹೇಳಿದರು.

ಮೋದಿ ಹಾರಿಸಿದ್ದಾರಾ? :  ಬಾಹ್ಯಾಕಾಶದಲ್ಲಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮೊದಿ ಭಾಷಣ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದಕುಮಾರಸ್ವಾಮಿ, ಅದೇನು ಪ್ರಧಾನಿ ನರೇಂದ್ರ ಮೋದಿ ಹಾರಿಸಿದ್ದಾರಾ?. ವಿಜ್ಞಾನಿಗಳು ಹಾರಿಸಿದ್ದಾರೆ. ಅದಕ್ಕೆಅರ್ಧಗಂಟೆ ಕಾಯಿಸಿಕೊಂಡು ಇದ್ದಾರೆ. ಅದೇನುದೊಡ್ಡ ಸಾಧನೆನಾ?

ಅದಕ್ಕಂತಲೇ ವಿಜ್ಞಾನಿಗಳ ಪಡೆಇದೆ. ಅವರ ಕೆಲಸವನ್ನುಯಾವುದೇ ಸರ್ಕಾರಇದ್ದರೂ  ಸಮರ್ಥವಾಗಿ ನಿಭಾಯಿಸುತ್ತದೆ.  ಇದನ್ನು ಹೇಳಿಕೊಂಡು ಲೋಕಸಭೆಚುನಾವಣೆ ಲಾಭ ಪಡೆದುಕೊಳ್ಳಬೇಕಾ? ಎಂದು ಟೀಕಿಸಿದರು.

ಐವತ್ತು ವರ್ಷಗಳ ಹಿಂದೆ ಚಾಲನೆ ಸಿಕ್ಕದ್ದನ್ನು ಇಂದು ಮೋದಿ ಅವರು ಉದ್ಘಾಟನೆ ಮಾಡಿದ್ದಾರೆ. ಅದನ್ನುತಾವೇ ಮಾಡಿರುವರೀತಿ ಬಿಂಬಿಸಿಕೊಳ್ಳುತ್ತಿದ್ದಾರೆ.  ಇದು ಮಹತ್ವಕೊಡುವಂತದ್ದೆನಲ್ಲ. ಪ್ರಧಾನಿ ನರೇಂದ್ರ ಮೋದಿ ಮಾಡಿರೋದುಅಂತಾ ಮಾಧ್ಯಮಗಳು ಬಿಂಬಿಸೋದು ಸರಿಯಲ್ಲಎಂದರು.


ಸಂಬಂಧಿತ ಟ್ಯಾಗ್ಗಳು

#Loksabha 2019 #Kumarswamy #Darshan #Mandya


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ