ಬಿಜೆಪಿ ಶಾಸಕನ ವಿರುದ್ಧ ಅಕ್ರಮ ಸಂಬಂಧದ ಆರೋಪ ?  ಪತ್ನಿ ಸ್ಪಷ್ಟನೆ

Kannada News

07-06-2017

ಬೆಂಗಳೂರು:- ರಾಯಚೂರು ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ತಿಪ್ಪರಾಜು ವಿರುದ್ಧ ಅಕ್ರಮ ಸಂಬಂಧದ ಆರೋಪ ಕೇಳಿಬಂದಿದೆ. ಮಹಿಳಾ ಸಬ್ ಇನ್ಸ್‍ಪೆಕ್ಟರ್ ( ಪಿಎಸ್'ಐ) ಬೇಬಿ ವಾಲೇಕರ್ ಎಂಬುವರ ಜೊತೆ ತಮ್ಮ ಪತಿ 2ನೇ ಮದುವೆಯಾಗಿದ್ದಾರೆ ಎಂದು ಶಾಸಕ ತಿಪ್ಪರಾಜು ಪತ್ನಿ ಸೌಮ್ಯ ಅವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಮಹಿಳಾ ಪಿಎಸ್ಐ ಬೇಬಿ ವಾಲೇಕರ್ ನನ್ನ ಜೀವನ ಹಾಳು ಮಾಡಿದ್ದಾಳೆ. ನನ್ನ ಗಂಡನನ್ನು ನನಗೆ ಕೊಡಿಸದಿದ್ದರೆ ನಾನು ಮತ್ತು ನನ್ನ ಮಕ್ಕಳು ಪ್ರಾಣ ಬಿಡುತ್ತೇವೆ," ಎಂದು ಸೌಮ್ಯ ತಿಪ್ಪರಾಜು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ಜಿಲ್ಲಾ ಪಂಚಾಯತ್ ಸದಸ್ಯೆಯಾಗಿರುವ ಸೌಮ್ಯ ಅವರು 3 ತಿಂಗಳ ಹಿಂದೆಯೇ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಇದೇ ವೇಳೆ, ದೂರು ನೀಡಿದ್ದಕ್ಕೆ ತನ್ನ ಗಂಡನಿಂದ ಜೀವ ಬೆದರಿಕೆ ಬಂದಿದೆ ಎಂದು ಸೌಮ್ಯ ಆರೋಪಿಸಿದ್ದಾರೆ. ಸೌಮ್ಯ ನೀಡಿರುವ ದೂರಿನ ಪ್ರಕಾರ, 4 ವರ್ಷದಿಂದ ಪಿಎಸ್'ಐ ಬೇಬಿ ವಾಲೇಕರ್ ಜೊತೆ ಅವರ ಪತಿ ತಿಪ್ಪರಾಜು ಸಂಬಂಧವಿದೆ. ಆಕೆ ಎಲ್ಲೆಲ್ಲಿ ವರ್ಗಾವಣೆಯಾಗುತ್ತಾಳೋ ಅಲ್ಲೆಲ್ಲಾ ತಮ್ಮ ಪತಿ ಆಕೆಯೊಂದಿಗೆ ಸಂಸಾರ ನಡೆಸುತ್ತಿದ್ದಾರೆ ಎಂದು ಸೌಮ್ಯ ಅಳಲು ತೋಡಿಕೊಂಡಿದ್ದಾರೆ. 16 ವರ್ಷದ ಹಿಂದೆ ಸೌಮ್ಯ ಮತ್ತು ತಿಪ್ಪರಾಜು ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅಲ್ಲದೆ ಮಾಧ್ಯಮಗಳಲ್ಲಿ ತಿಪ್ಪರಾಜು ಅನೈತಿಕ ಸಂಬಂಧದ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಅವರ ಪತ್ನಿ ಸೌಮ್ಯ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿದ ಸೌಮ್ಯ, ತಮ್ಮ ಪತಿ ತಿಪ್ಪರಾಜು ಶ್ರೀರಾಮಚಂದ್ರ ನಂಥವರು. ಯಾರೊಂದಿಗೂ ಅವರು ಅಕ್ರಮ ಸಂಬಂಧ ಹೊಂದಿಲ್ಲ. ನಾನು ಅವರೊಂದಿಗೆ ಸಂತೋಷದಿಂದ ಸಂಸಾರ ನಡೆಸುತ್ತಿದ್ದೇನೆ. ನಾನು ಯಾವ ಮಹಿಳಾ ಆಯೋಗಕ್ಕೂ ದೂರು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ