ಸ್ಪೇಸ್ ಸೂಪರ್ ಪವರ್ ಗಳಿಸಿದ ಭಾರತ 

 India achieved Space Super Power

27-03-2019

ಲೋಕಸಭಾ ಚುನಾವಣೆ ವೇಳೆಯಲ್ಲಿಯೇ, ಭಾರತದ ಪ್ರಜೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಹೌದು ಬಾಹ್ಯಾಕಾಶದಲ್ಲಿರುವ  ಉಪಗ್ರಹವನ್ನು ಕ್ಷಿಪಣಿ ಪ್ರಯೋಗಿಸಿ ಹೊಡೆದುರುಳಿಸುವ ಸಾಮಥ್ರ್ಯ ಹೊಂದಿರುವ ದೇಶಗಳ ಸಾಲಿಗೆ ಇನ್ಮುಂದೆ ಭಾರತವೂ ಸೇರ್ಪಡೆಯಾಗಿದೆ. 

ಈ ವಿಚಾರವನ್ನು ಸ್ವತಃ ಮೋದಿ ಇಂದು ಪ್ರಕಟಿಸಿದ್ದು,  ರಕ್ಷಣಾ ಸಂಸೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿಗಳು ಈ ಸಾಧನೆ ಮಾಡಿದ್ದಾರೆ ಎಂದು ಮೋದಿ ಶ್ಲಾಘಿಸಿದ್ದಾರೆ. ಇತ್ತೀಚಿಗಷ್ಟೇ ಭಾರತವು ಉಪಗ್ರಹ ಕ್ಷಿಪಣಿ ಪ್ರಯೋಗಿಸಿ ಕೆಳ ಕಕ್ಷೆಯಲ್ಲಿದ್ದ ಉಪಗ್ರಹವನ್ನು ಹೊಡೆದುರುಳಿಸಿತು.  ಮಿಷನ್ ಶಕ್ತಿ ಯೋಜನೆಯಡಿ ನಮ್ಮ ವಿಜ್ಞಾನಿಗಳು ಈ ಸಾಧನೆ ಮಾಡಿದ್ದಾರೆ. ಕೇವಲ ಮೂರು ನಿಮಿಷಗಳಲ್ಲಿ ಈ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಪ್ರಧಾನಿ ದೇಶದ ಜನತೆಗೆ ಮಾಹಿತಿ ನೀಡಿದ್ದಾರೆ. 
ಎ-ಸ್ಯಾಟ್  ಕ್ಷಿಪಣಿ ಬಗ್ಗೆ ಮಾಹಿತಿ ನೀಡಿದ ನರೇಂದ್ರ ಮೋದಿ, ಭೂಮಿಗೆ ಸನಿಹದ  ಕಕ್ಷೆಯಲ್ಲಿದ್ದ ಉಪಗ್ರಹವನ್ನು ಹೊಡೆದು ಉರುಳಿಸಿದ ಉಪಗ್ರಹ ನಿಗ್ರಹ ಕ್ಷಿಪಣಿ ಏ-ಸ್ಯಾಟ್ ನಮ್ಮ  ಬತ್ತಳಿಕೆ ಸೇರುವುದರೊಂದಿಗೆ ಭಾರತವು ವಿಶ್ವದ ಬಾಹ್ಯಾಕಾಶ ಶಕ್ತಿಯಾಗಿ ಹೊರಹೊಮ್ಮಿದೆ.  ಭೂಮಿಯಿಂದ 2000 ಕಿ.ಮೀ ಎತ್ತರವನ್ನು ಭೂ ಸನಿಹದ ಕಕ್ಷೆ ಎನ್ನುತ್ತಾರೆ.  ಏ-ಸ್ಯಾಟ್ ಕ್ಷಿಪಣಿ ವ್ಯವಸ್ಥೆಯೂ ಈ ಕಕ್ಷೆಯಲ್ಲಿರುವ ಉಪಗ್ರಹವನ್ನು ನಾಶಪಡಿಸುವ ಸಾಮಥ್ರ್ಯವನ್ನು ಹೊಂದಿದೆ ಎಂದು ಮೋದಿ ಮಾಹಿತಿ ನೀಡಿದ್ದಾರೆ. 
ಈ ಮಿಷನ್ ಶಕ್ತಿಯನ್ನು ನಾವು ಯಾರ ವಿರುದ್ಧವೂ ಬಳಸುವುದಿಲ್ಲ ಎಂದಿರುವ ಮೋದಿ, ಇದು ಸಂಪೂರ್ಣವಾಗಿ ಭಾರತದ ಭದ್ರತೆಗೆ ಸಂಬಂಧಿಸಿದ ವಿಚಾರವಾಗಿದೆ. ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಪೈಪೋಟಿಯನ್ನು ನಾವು ವಿರೋದಿಸುತ್ತೇವೆ.  ಎ-ಸ್ಯಾಟ್ ಪರೀಕ್ಷೆಯೂ ಯಾವುದೇ ಅಂತಾರಾಷ್ಟ್ರೀಯ ನಿಯಮ ಹಾಗೂ ಕಾನೂನನ್ನು ಉಲ್ಲಂಘಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. 
ಇನ್ನು ದೇಶದ ಈ ಸಾಧನೆಗೆ ಕಾಂಗ್ರೆಸ್ ಕೂಡ ಅಭಿನಂದನೆ ಸಲ್ಲಿಸಿದ್ದು, ಈ ಸಾಧನೆಗಾಗಿ ನಾವು ಇಸ್ರೋ ಮತ್ತು ಭಾರತ ಸರ್ಕಾರವನ್ನು ಅಭಿನಂದಿಸುತ್ತೇವೆ. 1961 ರಲ್ಲಿ ನೆಹರು ಬಾಹ್ಯಾಕಾಶ ಯೋಜನೆ ಆರಂಭಿಸಿದ್ದರು. ಇಂದಿರಾ ಗಾಂಧಿ ಆರಂಭಿಸಿದ ಇಸ್ರೋ ಹಲವು ಸಾಧನೆಗಳ ಮೂಲಕ ಭಾರತಕ್ಕೆ ಹೆಮ್ಮತಂದಿದೆ ಎಂದಿದೆ. ಒಟ್ಟಿನಲ್ಲಿ ಚುನಾವಣೆ ಎದುರಿನಲ್ಲಿ ದೇಶದ ಸಾಧನೆಯ ಬಗ್ಗೆ ಮೋದಿ ಮಾತನಾಡಿರುವುದು  ಬಿಜೆಪಿಯಲ್ಲಿ ಖುಷಿ ತಂದಿದ್ರೆ ಕಾಂಗ್ರೆಸ್ ಇದನ್ನು ರಾಜಕೀಯ ಗಿಮಿಕ್ ಎಂಬಂರ್ಥದಲ್ಲಿ ಟೀಕಿಸುವ ಸಾಧ್ಯತೆ ಇದೆ. 


ಸಂಬಂಧಿತ ಟ್ಯಾಗ್ಗಳು

#India #Space Super Power #Narendra Modi # Achieved


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ