ತಲೈವಾಗೆ ಕಂಗನಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

 25 Cr Remuneration Earned by Kangana for Taliva

27-03-2019

ಈ ವರ್ಷ ಬಾಲಿವುಡ್‍ನಲ್ಲಿ ಬಯೋಪಿಕ್‍ಗಳದ್ದೇ ಹಾವಳಿ. ನರೇಂದ್ರ ಮೋದಿ, ಮನ್ ಮೋಹನ್ ಸಿಂಗ್, ರಾಹುಲ್ ಗಾಂಧಿ ಬಳಿಕ ಇದೀಗ ದಕ್ಷಿಣ ಭಾರತದ ಖ್ಯಾತ ರಾಜಕಾರಣಿ, ಸಿಎಂ ಹಾಗೂ ಸಿನಿಮಾ ನಟಿ ದಿ.ಜಯಲಲಿತಾ ಬಯೋಪಿಕ್ ಕೂಡ ತೆರೆಗೆ ಬರಲಿದೆ. ಸಾಕಷ್ಟು ನೀರಿಕ್ಷೆ ಹುಟ್ಟಿಸಿರುವ ಈ ಚಿತ್ರದಲ್ಲಿ ಕಂಗನಾ ರನಾವತ್ ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ ಕಂಗನಾ ತಮಿಳು ಭಾಷೆ ಕಲಿಯಲು ಆರಂಭಿಸಿದ್ದಾರೆ. 

ಕೇವಲ ತಮಿಳು ಭಾಷೆ ಮಾತ್ರವಲ್ಲದೆ ಜಯಲಲಿತಾ ವಿಡಿಯೋಗಳನ್ನು ನೋಡಿ, ಅವರು ಮಾತನಾಡುವ ಶೈಲಿ, ಅವರ ಹಾವಭಾವವನ್ನು ಅನುಕರಿಸುವುದನ್ನು ಅಭ್ಯಾಸ ಮಾಡಲಾರಂಭಿಸಿದ್ದಾರೆ. ಅವರ ಭಾಷಣದ ವಿಡಿಯೋಗಳನ್ನು ನೋಡಿ ಅಭ್ಯಾಸ ಮಾಡಿ ಅವರನ್ನು ಅನುಕರಿಸಲು ಕಲಿತುಕೊಳ್ಳುತ್ತಿರುವ ಸಂಜನಾ, ಪಾತ್ರವನ್ನು ಅರ್ಥಮಾಡಿಕೊಳ್ಳುವುದಕ್ಕೆ ಇದು ಅನಿವಾರ್ಯ ಎನ್ನುತ್ತಾರೆ. 

ಇನ್ನು ಜಯಲಲಿತಾ ಅವರ ಬಗ್ಗೆ ಮಾತನಾಡಿರುವ ಕಂಗನಾ ರನಾವುತ್,ಜಯಲಲಿತಾ ಅವರ ಬದುಕಿನ ಸಂಘರ್ಷಗಳು ನನ್ನ ಬದುಕಿನಂತೆಯೇ ಇದೆ.  ಆದರೆ ಅವರ ಯಶೋಗಾಥೆ ನನಗಿಂತ ದೊಡ್ಡದು.  ಅವರ ಬದುಕಿನ ಕತೆಯನ್ನು ಸ್ಕ್ರಿಪ್ಟ್ ನಲ್ಲಿ ಓದಿದಾಗ ನಂಗೆ ನನ್ನ ಬದುಕು ನೆನಪಾಯಿತು ಎಂದು ಕಂಗನಾ ಪ್ರತಿಕ್ರಿಯಿಸಿದ್ದಾರೆ. 


ತಲೈವಿ ಹೆಸರಿನಲ್ಲಿ ತಮಿಳಿನಲ್ಲಿ ಹಾಗೂ ಜಯಾ ಎನ್ನುವ ಹೆಸರಿನಲ್ಲಿ ಹಿಂದಿಯಲ್ಲಿ  ಈ ಚಿತ್ರ ಮೂಡಿ ಬರಲಿದ್ದು, ಕಾಲಿವುಡ್ ಸೇರಿದಂತೆ ಹಿಂದಿಯಲ್ಲೂ ಜಯಲಲಿತಾ ಬಯೋಪಿಕ್ ಮೋಡಿ ಮಾಡುವ ಭರವಸೆ ಮೂಡಿಸಿದೆ. ಈ ಚಿತ್ರಕ್ಕಾಗಿ ಕಂಗನಾ ರಣಾವುತ್ ಬರೋಬ್ಬರಿ 25 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ.

ಇದು ಬಾಲಿವುಡ್‍ನ ಹೈಯೆಸ್ಟ್ ಸಂಭಾವನೆ ಎನ್ನಿಸಿಕೊಂಡಿದ್ದು, ಪದ್ಮಾವತ್ ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ 13 ಕೋಟಿ ಸಂಭಾವನೆ ಪಡೆದುಕೊಂಡು ಸುದ್ದಿಯಾಗಿದ್ದರು. ಕಂಗನಾ ರಣಾವುತ್ ಅಭಿನಯದ ಹಲವು ಚಿತ್ರಗಳು ಬಾಕ್ಸಾಫೀಸ್‍ನಲ್ಲಿ ಮೋಡಿ ಮಾಡಿ 100 ಕೋಟಿ ಕ್ಲಬ್ ಸೇರಿರೋದರಿಂದ ಚಿತ್ರತಂಡ ಇಷ್ಟು ಸಂಭಾವನೆ ಪಾವತಿಸಲು ಸಿದ್ಧವಾಗಿದೆ. 


ಸಂಬಂಧಿತ ಟ್ಯಾಗ್ಗಳು

#Jayalalitha #Kangana Ranaut #Movie #Jaya


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ